ದೇಶದ ಏಕೈಕ ನಾಗಗಣೇಶ : 21 ಚಿಹ್ನೆ ರಂಗೋಲಿ ಹಾಕಿದ್ರೆ ನಡೆಯುತ್ತೆ ಚಮತ್ಕಾರ..

K 2 Kannada News
ದೇಶದ ಏಕೈಕ ನಾಗಗಣೇಶ : 21 ಚಿಹ್ನೆ ರಂಗೋಲಿ ಹಾಕಿದ್ರೆ ನಡೆಯುತ್ತೆ ಚಮತ್ಕಾರ..
WhatsApp Group Join Now
Telegram Group Join Now

K2kannadanews.in

Naga Ganesh ನಾಗ ಗಣೇಶ : ದೇಶದಲ್ಲಿ ಅದೆಷ್ಟು ದೇವಾಲಯಗಳು (Temples) ವಿಜ್ಞಾನಕ್ಕೆ (Since) ಸವಾಲು ಹಾಕಿವೆ. ಅದರಲ್ಲೂ ಕೂಡ ಸಾಕಷ್ಟು ಗಣಪತಿ (Ganesh temple) ದೇವಾಲಯಗಳಿವೆ. ದೇಶದ ಏಕೈಕ್ ನಾಗ ಗಣಪತಿ ದೇವಾಲಯದ ಬಗ್ಗೆ ಗೊತ್ತಾ. ಈ ದೇವಾಲಯವು ಸುಮಾರು 1103 ವರ್ಷ ಇತಿಹಾಸ (History) ಹೊಂದಿದೆ. ಪ್ರತಿವರ್ಷವೂ ಇಲ್ಲಿಯ ಗಣೇಶನ ಮೂರ್ತಿ ಬೆಳೆಯುತ್ತಲೇ ಇದೆ. ಈ ಬಗ್ಗೆ ತಿಳಿಯೋಣ ಬನ್ನಿ..

K2 ಕನ್ನಡ ನ್ಯೂಸ್ ಓದುಗರಿಗೆ ಗಣೇಶ ಚತುರ್ಥಿ ಶುಭಾಷಯಗಳು (Happy ganesh chaturti). ದೇವಾಲಯ ಛತ್ತೀಸ್‌ಗಢದ (Chathisgad) ಡೋಲ್ಕಲ್ ಬೆಟ್ಟದಲ್ಲಿದೆ, ಇದು ಅರಣ್ಯದೊಳಗೆ 14 ಕಿಮೀ ದೂರದಲ್ಲಿರುವ ಬೆಟ್ಟದಲ್ಲಿದೆ. ಈ ನಾಗ ಗಣಪತಿ ಮೂರ್ತಿಯ ವಿಶೇಷವೆಂದರೆ ಪ್ರತಿವರ್ಷವೂ ಬೆಳೆಯುತ್ತಲೇ ಇದೆ, ಅಲ್ಲದೆ ಬೆಟ್ಟದ ತುತ್ತ ತುದಿಯಲ್ಲಿರುವ ಈ ಗಣೇಶನ ಮೂರ್ತಿ ರಂಗೋಲಿ ಹಾಕಿದಾಗ 360 ಡಿಗ್ರಿಯಲ್ಲಿ ತಿರುಗುತ್ತದೆ, ಈ ಪವಾಡದ ಹಿಂದಿನ ಕಾರಣವೇನು ಎಂಬುವುದನ್ನು ಬೇಧಿಸಲು ಈಗಲೂ ಸಾಧ್ಯವಿಲ್ಲ.

ಈ ದೇವಾಲಯವನ್ನು 2ನೇ ಶತಮಾನದಲ್ಲಿ ನಾಗ ಸಾಮ್ರಾಜ್ಯ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಗಣಪತಿಯ ಕಲ್ಲು ಕೂಡ ತುಂಬಾನೇ ವಿಶೇಷವಾಗಿದೆ, ಇಂಥದ್ದೊಂದು ಕಲ್ಲು ಎಲ್ಲಿಯೂ ಕಂಡು ಬಂದಿಲ್ಲ ಎಂದು ಪುರಾತತ್ವ ಇಲಾಖೆ ಹೇಳುತ್ತದೆ. 1924ರಲ್ಲಿ ಛತ್ತೀಸ್‌ಗಢದಲ್ಲಿ ಭೂಕಂಪನ ಸಂಭವಿಸುತ್ತದ, ಅವಾಗ ಡೋಲ್ಕಲ್ ಬೆಟ್ಟ 4 ವಿಭಾಗವಾಗುತ್ತದೆ, ಅದರೆ ಈ ಮೂರ್ತಿ ಇರುವ ಬೆಟ್ಟದ ಭಾಗಕ್ಕೆ ಏನೂ ಆಗದೆ ಹಾಗೆಯೇ ಉಳಿಯುತ್ತದೆ.

ಡೋಲ್ಕಲ್ ಬೆಟ್ಟ ಹತ್ತುವುದು ಸುಲಭವಲ್ಲ, ಹಿಗೆ ಹತ್ತಲು ಪ್ರಯತ್ನ ಮಾಡಿದ ಹಲವಾರು ಜನರು ತೊಂದರೆ ಅನುಭವಿಸಿದ್ದಾರೆ, ಅದರೆ ಅದರ ಸಮೀಪ ಇರುವ ಬಸ್ಕಾರ್ ಬೆಟ್ಟ ಹತ್ತುವುದು ಸುಲಭ, ಈ ಬೆಟ್ಟ ಹತ್ತಿದರೆ ಡೋಲ್ಕಲ್ ಬೆಟ್ಟದಲ್ಲಿರುವ ಗಣೇಶನ ದರ್ಶನ ಪಡೆಯಬಹುದು. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು ಬಂದು ಗಣೇಶನ ದರ್ಶನ ಪಡೆಯುತ್ತಾರೆ.

ಈ ದೇವಾಲಯದ ಪೂಜೆಯನ್ನು ಅಲ್ಲಿಯ ಸರ್ಕಾರ ವಹಿಸಿಕೊಂಡಿದ್ದು ಪುರೋಹಿತರನ್ನು ಹೆಲಿಕಾಫ್ಟರ್‌ನಲ್ಲಿ ಕರೆದುಕೊಂಡು ಬಂದು ಪೂಜೆ ಸಲ್ಲಿಸಿ ಹೋಗಲಾಗುವುದು. ಈ ಬೆಟ್ಟದಲ್ಲಿ ಇಬ್ಬರು ನಿಲ್ಲಬಹುದು ಅಷ್ಟೇ. ಇಲ್ಲಿಗೆ ನಾಗ ಜನಾಂಗದವರು ಸುಲಭದಲ್ಲಿ ಹತ್ತಿ ಬರುತ್ತಾರೆ, ಆದರೆ ಬೇರೆಯವರಿಗೆ ಈ ಬೆಟ್ಟ ಹತ್ತವುದು ಸುಲಭವಲ್ಲ. ಡೋಲ್ಕರ್ ಬೆಟ್ಟದಲ್ಲಿರುವ ನಾಗ ಗಣಪತಿಯನ್ನು ಕೆತ್ತಿ ಮಾಡಿದ್ದಲ್ಲ, ಮಂತ್ರ ಶಕ್ತಿಯಿಂದ ಮಾಡಿದ್ದು ಎಂದು ಹೇಳಲಾಗುತ್ತಿದೆ.

ನಾಗ ಸಾಮ್ರಾಜ್ಯದ 21 ಚಿಹ್ನೆಯ ರಂಗೋಲಿ ಹಾಕಿದರೆ ಗಣಪತಿ ಒಂದು ಸುತ್ತು ಹಾಕುತ್ತದೆ. ರಂಗೋಲಿಯ ತೂಕದ ಒತ್ತಡಕ್ಕೆ ಗಣಪತಿ ಮೂರ್ತಿ ತಿರುಗುವಂಥ ತಂತ್ರಜ್ಞಾನ ಆ ಕಾಲದಲ್ಲಿಯೇ ಮಾಡಲಾಗಿದೆ ಎಂದು ಹೇಳಲಾಗುವುದು, ಅದರೆ ರಂಗೋಲಿ ತೂಕದ ಬೇರೆ ಯಾವುದೇ ವಸ್ತು ಇಟ್ಟರು ಗಣಪತಿಯ ಮೂರ್ತಿ ತಿರುಗುವುದಿಲ್ಲ, ಬೇರೆ ಯಾವುದೇ ರಂಗೋಲಿ ಬರೆದರೂ ಮೂರ್ತಿ ತಿರುಗಲ್ಲ, ಆದರೆ ನಾಗ ಸಾಮ್ರಾಜ್ಯದ 21 ಚಿಹ್ನೆ ಬರೆದರೆ ಮೂರ್ತಿ ಒಂದು ಸುತ್ತು ಹಾಕುತ್ತದೆ. ಇಲ್ಲಿಯ ಪವಾಡಗಳ ಕಾರಣದಿಂದ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತಿರುವ ದೇವಾಲಯವಾಗಿದೆ.

WhatsApp Group Join Now
Telegram Group Join Now
Share This Article