K2kannadanews.in
Rat tips ಇಲಿಗಳ ಕಾಟ : ಮನೆಯಲ್ಲಿ ಇಲಿಕಾಟ ಹೆಚ್ಚಾಗಿದೆಯೇ. ಇಲಿಗಳ ಕಾಟದಿಂದ ಬೆಸತ್ತು ಹೋಗಿದ್ರೆ, ನಿಮ್ಮ ಮನೆಗೆ ಇಲಿಗಳು ಬರುವ ಜಾಗದಲ್ಲಿ ಅಥವಾ ಮನೆಯ ಮುಂದೆ ಅಥವಾ ಹಿಂದೆ ಈ ಒಂದು ಸಸಿಗಳನ್ನು ನೆಡುವುದರಿಂದ ನಿಮ್ಮ ಇಲಿಗಳು ನಿಮ್ಮ ಮನೆಯತ್ತ ಸುಳಿಯುವುದಿಲ್ಲ.
ಹೌದು ಇಲಿಗಳಿಗೆ ಕೆಲ ಸಸಿಗಳ ಮತ್ತು ಹೂಗಳ ಸುವಾಸನೆ ಕಸದಾಯಕವಾಗಿರುತ್ತದೆ. ಮನುಷ್ಯರಿಗೆ ಇಷ್ಟವಾಗಿರುವ ಸುವಾಸನೆ ಇನಿಗಳಿಗೆ ವಿಷಕಾರಿಯಾಗಿರುತ್ತದೆ ಹಾಗಾಗಿ ಅಂತಹ ಸಸಿಗಳನ್ನು ಮನೆಯಲ್ಲಿ ಬೆಳೆಸಿ ಇಲಿಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು. ಮುಖ್ಯವಾಗಿ ಇಲ್ಲಿ ಪುದಿನ, ಚೆಂಡು ಹೂವು ಮತ್ತು ಘಂಟೆ ಹೂಗಳ ಸಸಿಗಳನ್ನು ನೀಡುವುದರಿಂದ ಇಲಿಗಳು ಮನೆಯತ್ತ ಸುಳಿಯುವುದಿಲ್ಲ.
ಚೆಂಡು ಹೂವುಗಳು ನೋಡಲು ಚೆಂದ, ಅವುಗಳ ಬಣ್ಣವೂ ಸೆಳೆಯುತ್ತವೆ, ಆದರೆ ಇಲಿಗಳ ಪಾಲಿಗೆ ಚೆಂಡು ಹೂವಿನ ಸಸಿ ಮತ್ತು ಹೂಗಳ ಬಣ್ಣ ಕಷ್ಟ. ಚೆಂಡು ಹೂವಿನ ಗಿಡಗಳು ನಿಮ್ಮ ಮನೆಯ ಗಾರ್ಡನ್ ಅಥವಾ ಮನೆ ಸುತ್ತಮುತ್ತ ಬೆಳೆಸಿದರೆ ಸಾಕು. ಕಾರಣ ಚೆಂಡು ಹೂವಿನ ವಾಸನೆಯು ಇಲಿಗಳಿಗೆ ಆಗಿ ಬರುವುದಿಲ್ಲ, ವಾಸನೆಯಿದ್ದಲ್ಲಿ ಇಲಿಗಳು ಬರುವುದಿಲ್ಲ. ಅಲ್ಲದೇ ಚೆಂಡು ಹೂವುಗಳ ಗಾಢ ಬಣ್ಣ ಇರುವುದರಿಂದ ಇಲಿಗಳಿಗೆ ಆಗಿಬರುವುದಿಲ್ಲ.
ಪುದೀನ ಎಲೆಗಳ ಪರಿಮಳ ಮನುಷ್ಯರಿಗೆ ಸುವಾಸನೆ ಇಷ್ಟವಾದರೆ, ಇಲಿಗಳಿಗೆ ತುಂಬ ಕಷ್ಟ. ಮನೆಯ ಬಾಗಿಲಲ್ಲಿ ಅಥವಾ ಹಿಂಬದಿಯ ಕಿಟಕಿಗಳ ಬಳಿ ಪುದೀನಾ ಸಸಿ ನೆಟ್ಟರೆ, ಆಹಾರಕ್ಕಾಗಿ ಇಲಿಗಳು ಮನೆಯೊಳಗೆ ಬರುವುದಿಲ್ಲ. ಪುದೀನಾ ಎಲೆಗಳ ವಾಸನೆಯಿಂದ ಇಲಿಗಳಿಗೆ ಆಹಾರದ ವಾಸನೆಯೂ ಬರುವುದಿಲ್ಲ. ಈ ಕಾರಣಕ್ಕೆ ಇಲಿಗಳು ಮನೆ ಸಮೀಪವೂ ಸುಳಿಯುವುದಿಲ್ಲ.
ಘಂಟೆ ಹೂವು (daffodils) ಸಸಿಗಳನ್ನು ಮನೆಯ ಬಳಿ ಬೆಳೆಸಿದರೆ ಇಲಿಗಳು ಹತ್ತಿರವೂ ಸುಳಿಯುವುದಿಲ್ಲ. ಈ ಹೂವುಗಳು ಹೊರಹೊಮ್ಮುವ ವಿಷಕಾರಿ ವಾಸನೆಗೆ ಇಲಿಗಳು ಮನೆಯ ಹತ್ತಿರವೂ ಸುಳಿಯದಂತೆ ತಡೆಯುತ್ತದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಈ ಸಸಿ ನೆಟ್ಟರೆ ಚೆನ್ನಾಗಿ ಬೆಳೆಯುತ್ತವೆ.