ಕುಕ್ಕರ್​ ಸೀಟಿ ಹಾಕಿದರೆ ಒಳಗೆ ಇರುವ ನೀರು ಹೊರಗೆ ಬರುತ್ತ ಈ ಟ್ರಿಕ್ ಬಳಸಿ..?

K 2 Kannada News
ಕುಕ್ಕರ್​ ಸೀಟಿ ಹಾಕಿದರೆ ಒಳಗೆ ಇರುವ ನೀರು ಹೊರಗೆ ಬರುತ್ತ ಈ ಟ್ರಿಕ್ ಬಳಸಿ..?
WhatsApp Group Join Now
Telegram Group Join Now

K2kannadanews.in

Kitchen Tips ಪ್ರೆಶರ್ ಕುಕ್ಕರ್‌ : ನಿಮ್ಮ ಮನೇಲಿ ಇರುವ ಕುಕ್ಕರ್ ಬಳಕೆ ಮಾಡುತ್ತೇವೆ. ಅಡುಗೆ ಮಾಡುವಾಗ ಕುಕ್ಕರ್​ ಸೀಟಿ ಹಾಕಿದರೆ ಒಳಗೆ ಇರುವ ನೀರು ಹೊರಗೆ ಬರುತ್ತಾ, ಹಾಗಾದ್ರೆ ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ.

ಪ್ರತಿಯೊಂದು ಅಕ್ಕಿ, ಬೇಳೆಕಾಳುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುತ್ತೇವೆ. ಕುಕ್ಕರ್ ಮತ್ತು ಗ್ಯಾಸ್ ಸ್ಟೌವ್‌ಗಳನ್ನು ಸ್ವಚ್ಛಗೊಳಿಸುವುದು ಕಷ್ಟ ಮತ್ತು ಸಮಯ ವ್ಯರ್ಥವಾಗುತ್ತದೆ. ಇಂತಹ ಸಮಸ್ಯೆಗಳು ಎದುರಾಗಿದ್ದರೆ ಚಿಂತೆ ಬೇಡ ಕೆಲವು ಸಲಹೆಗಳಿವೆ ಟ್ರೈಮಾಡಿ. ನೀವು ಕುಕ್ಕರ್‌ನಲ್ಲಿ ಹೆಚ್ಚು ನೀರು ಹಾಕಿದರೆ, ಅದು ಉರಿ ಏರುತ್ತಿದ್ದಂತೆ ಒತ್ತಡದಲ್ಲಿ ನೀರು ಕೂಡ ಹೊರಬರಲಾರಂಭಿಸುತ್ತದೆ. ಸರಿಯಾದ ಪ್ರಮಾಣದಲ್ಲಿ ಮಾತ್ರ ನೀರು ಹಾಕಿ.

ಕುಕ್ಕರ್‌ನಲ್ಲಿ ಅಕ್ಕಿ, ಬೇಳೆ ಬೇಯಿಸುವಾಗ ಸ್ಟವ್ ಅನ್ನು ಹೆಚ್ಚಿನ ಉರಿಯಲ್ಲಿ ಇಡುವುದರಿಂದ ಕುಕ್ಕರ್ ಶಿಳ್ಳೆ ಬರಬಹುದು. ಆದರೆ ನೀರು ಹರಿದು ಹೋಗುತ್ತದೆ. ಆದ್ದರಿಂದ, ನೀವು ಮಧ್ಯಮವಾಗಿ ಬೇಯಿಸಬೇಕು. ನಿಮ್ಮ ಕುಕ್ಕರ್ ಶಿಳ್ಳೆ ಹೊಡೆಯುವುದಿಲ್ಲ. ಆದರೆ ನೀರು ಸುರಿಯುತ್ತದೆ. ಆದ್ದರಿಂದ, ಕಾಲಕಾಲಕ್ಕೆ ಸೀಟಿಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಹಲವು ಬಾರಿ ನಾವು ಒಂದು ಕುಕ್ಕರ್‌ನಲ್ಲಿರುವ ರಬ್ಬರ್ ಸ್ವಚ್ವವಾಗಿ ಇಡಿ ಹಾಗೂ ಆಗಾಗ್ಗ ಕುಕ್ಕರ್​ಗೆ ಬಳಕೆ ಮಾಡುವ ರಬ್ಬರನ್ನು ಬದಲಾಯಿಸುತ್ತಿರಿ.

ನೀವು ಬಳಕೆ ಮಾಡುವ ಕುಕ್ಕರ್​ ಹಳೆಯದಾಗಿದ್ದರೆ ಅಥವಾ ಮುಚ್ಚಳವನ್ನು ಹಲವು ಬಾರಿ ಬಿದ್ದು ಹಾಳಾಗಿದ್ದರೆ ಒತ್ತಡ ಸೋರಿಕೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿಯೂ ನೀರು ಹೊರಬರುತ್ತದೆ. ಆದ್ದರಿಂದ, ಇದು ಸಂಭವಿಸಿದಲ್ಲಿ ತಕ್ಷಣವೇ ಕುಕ್ಕರ್ ಮುಚ್ಚಳವನ್ನು ಪರಿಶೀಲಿಸಿ.

WhatsApp Group Join Now
Telegram Group Join Now
Share This Article