K2kannadanews.in
Sleep on Railway track UP : ವ್ಯಕ್ತಿಯೊಬ್ಬ ಮನೆಯ ಹಾಸಿಗೆ ಮೇಲೆ ಆರಾಮಾಗಿ ಮಲಗಿರುವ ರೀತಿಯಲ್ಲೇ ರೈಲು ಹಳಿಯ ಮೇಲೆ ಮಲಗಿದ ಅಚ್ಚರಿಯ ಘಟನೆಯೊಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
X ನ ಪವನ್ ಕುಮಾರ್ ಶರ್ಮ ಎಂಬ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ವೈರಲ್ ವಿಡಿಯೋದಲ್ಲಿ ರೈಲು ಹಳಿಗಳ ಮೇಲೆ ವ್ಯಕ್ತಿಯೊಬ್ಬ ಮಲಗಿದ್ದು, ಬಿಸಿಲಿನಿಂದ ರಕ್ಷಣೆಗೆ ಕೆಳಗೆ ಟವೆಲ್ ಮತ್ತು ಮೇಲೆ ಕೊಡೆ ಹಾಕಿಕೊಂಡು ಹಾಯಾಗಿ ನಿದ್ರೆ ಮಾಡುತ್ತಿದ್ದಾನೆ. ಸರಿಯಾದ ಸಮಯಕ್ಕೆ ಲೊಕೊ ಪೈಲಟ್ ನೋಡಿದ್ದು, ತಕ್ಷಣ ರೈಲು ನಿಲ್ಲಿಸಿದ್ದಾರೆ. ಬಳಿಕ ಕೆಳಗಿಳಿದು ಬಂದು ಆತನನ್ನು ಹಳಿಯಿಂದ ಎಬ್ಬಿಸಿ ಕಳುಹಿಸಿ, ನಂತರ ರೈಲು ಮುಂದೆ ಸಾಗಿದೆ.