187 ಕೋಟಿ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ : ಬಸನಗೌಡ ದದ್ದಲ್..

K 2 Kannada News
187 ಕೋಟಿ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ : ಬಸನಗೌಡ ದದ್ದಲ್..
WhatsApp Group Join Now
Telegram Group Join Now

K2kannadanews.in

Political News ರಾಯಚೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ನಿಗಮ ಅಧ್ಯಕ್ಷ ಬಸನಗೌಡ ದದ್ದಲ್ ಪ್ರಕಟಣೆ ಮೂಲಕ‌ ಸ್ಪಷ್ಟನೆ ನೀಡಿದ್ದಾರೆ.

ಹೌದು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಹೆಸರು ನ್ಯಾಯಲಯಕ್ಕೆ ಸಲ್ಲಿಸಿದ ವರದಿಯಲ್ಲಿ, ಆರೋಪಿ ನಂಬರ್ ಎಂಟು ಜೊತೆ ವಾಟ್ಸಪ್ ನಲ್ಲಿ ಚಾಟಿಂಗ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಇವುಗಳಿಗೆ ಉತ್ತರವಾಗಿ ಪತ್ರಿಕಾ ಹೇಳಿಕೆ ನೀಡಿರುವ ನಿಗಮದ ಅಧ್ಯಕ್ಷರು. ವಿರೋಧ ಪಕ್ಷಗಳು ಬೇಕಂತಲೇ ನನ್ನ ಮೇಲೆ ಆರೋಪ‌ ಮಾಡುತ್ತಿವೆ. ಈಗಾಗಲೇ ಐದು ಜನ ಆರೋಪಗಳನ್ನು ಸಹ ಬಂಧಿಸಲಾಗಿದೆ. ಎಸ್.ಐ.ಟಿ ಹಾಗೂ ಸಿ.ಬಿ.ಐ ಸಂಸ್ಥೆಗಳು ತನಿಖೆ ಕೈಗೊಂಡಿವೆ. ನಿಗಮದ ಹಣ ಯಾರೇ ಕಬಳಿಸುವ ಪ್ರಯತ್ನ ಮಾಡಿದ್ರೂ ಅಂತಹ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ. ನಿಗಮದ ಹಣ ದುರ್ಬಳಕೆ ಆಗಿರೋದಕ್ಕೆ ನನಗೆ ಬಹಳ ನೋವುಂಟು ಮಾಡಿದೆ. ನಾನು ನಿಗಮದ ಅಧ್ಯಕ್ಷನಾದ ಬಳಿಕ ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಆದ್ರೆ ನಿಗಮದ ಅಧ್ಯಕ್ಷನಾಗಿ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದ ಬಸನಗೌಡ ದದ್ದಲ್ ಸ್ಪಷ್ಟನೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article