K2kannadanews.in
Political News ರಾಯಚೂರು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷ ಪಾರ್ಟಿ ಫಂಡ್ ಕೊಟ್ಟಿರಲಿಲ್ಲ. ಚುನಾವಣೆಯಲ್ಲಿ ನನ್ನ ಸ್ವಂತ ಹಣ ಕೊಟ್ಟಿದ್ದೇನೆ ಎಂದು KPCC ರಾಜ್ಯ ಕಾರ್ಯದರ್ಶಿಯಾಗಿರುವ ಶ್ರೀದೇವಿ ನಾಯಕ್ ರಾಜ್ಯ ಮುಖಂಡರ ಮುಂದೆ ಅಸಮಧಾನ ತೋಡಿಕೊಂಡಿದ್ದಾರೆ.
ಈ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಒಡಾಡುತ್ತಿದ್ದು. ಎಂಎಲ್ಸಿ ಗಳಾದ ಸಲೀಂ ಅಹಮದ್, ವಸಂತ ಕುಮಾರ್ ಹಾಗೂ ಇನ್ನಿತರ ನಾಯಕರು ಕಾಂಗ್ರೇಸ್ ಕಛೇರಿಗೆ ಭೇಟಿ ಮಾಡಿದ ವೇಳೆ ಅವರ ಮುಂದೆ ಶ್ರೀದೇವಿ ನಾಯಕ್ ಆಕ್ರೋಶ ಹೊರಹಾಕಿದರು. ಇನ್ನೂ ದೇವದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಯಾವುದು ಸರಿ ಇಲ್ಲ ಎಂಬ ನಿಟ್ಟಿನಲ್ಲಿ ಈ ಒಂದು ವಿಡಿಯೋ ಬಿಂಬಿಸುತ್ತಿದೆ. ಚುನಾವಣೆ ನಡೆದಾಗಿನಿಂದಲೂ ಕೂಡ ಯಾವೊಬ್ಬ ಮುಖಂಡರು ಕೂಡ ಇಲ್ಲಿ ಸಭೆ ಕರೆದಿಲ್ಲ ಎಂದು ಅಸಮಾಧಾನ ಕಾರ್ಯಕರ್ತರು ಹಾಕಿದರು.
KPCC ರಾಜ್ಯ ಕಾರ್ಯದರ್ಶಿಯಾಗಿರುವ ಶ್ರೀದೇವಿ ನಾಯಕ್ ಅವರೂ ಸಹ ಅಸಮಧಾನ ಹೊರಹಾಕಿ, ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾಗಿ ಅಪಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಪಾರ್ಟಿ ಫಂಡ್ ಕೊಟ್ಟಿರಲಿಲ್ಲ. ಚುನಾವಣೆಯಲ್ಲಿ ನನ್ನ ಸ್ವಂತ ಹಣ ಕೊಟ್ಟಿದ್ದೇನೆ. ಕ್ಷೇತ್ರದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಿದ ಕಾರಣ ನನಗೆ 3000 ಓಟು ಬಂದಿದೆ. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಪಾಟೀಲ್ ಇಟಗಿ ಅವರನ್ನು ತರಾಟೆಗೆ ತೆಗೆದುಕೊಂಡರು.