![]() |
![]() |
![]() |
![]() |
![]() |
ರಾಯಚೂರು : ಡಮ್ಮಿ ಕ್ಯಾಂಡಿಡೇಟ್ ಅಂದ್ರೆ ಏನು? ನನಗೆ ಅದರ ಅರ್ಥವೇ ಗೊತ್ತಿಲ್ಲ. ನಾನು ಎಲ್ಲ ಅಭ್ಯರ್ಥಿಗಳಿಗಿಂತಲೂ ಫುಲ್ ಸ್ಟ್ರಾಂಗ್ ಇದ್ದೇನೆ ಎಂದು ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹಮ್ಮದ್ ಶಾಲಂ ಗುಡುಗಿದರು.
ಪ್ರಚಾರಕ್ಕೆ ಹೋದಾಗ ನನಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ವಿರೋಧಿಗಳು ನನ್ನನ್ನು ಡಮ್ಮಿ ಕ್ಯಾಂಡಿಡೇಟ್ ಎಂದಿದ್ದಾರೆ. ಆದರೆ, ಅದರ ಅರ್ಥ ನನಗೆ ಗೊತ್ತಿಲ್ಲ. ನಾನು ಎಲ್ಲರಿಗಿಂತಲೂ ಫುಲ್ ಸ್ಟ್ರಾಂಗ್ ಇದ್ದೇನೆ. ಅಷ್ಟೇ ಅಲ್ಲ ಎಲ್ಲ ಅಭ್ಯರ್ಥಿಗಳಂತೆ ಎಲೆಕ್ಷನ್ ಎದುರಿಸುವ ಸಾಮರ್ಥ್ಯ ಕೂಡ ನನಗಿದೆ ಎಂದರು.
ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಸೈಯದ್ ಯಾಸೀನ್ ಅವರ ಪರ ಚುನಾವಣೆಯ ನೇತೃತ್ವ ವಹಿಸಿದ್ದೆ. ಅವರ ಪರವಾಗಿ ಸಂಪೂರ್ಣ ಜವಾಬ್ದಾರಿ ಹೊತ್ತು ಚುನಾವಣೆ ಮಾಡಿದ ಅನುಭವ ನನಗಿದೆ. ಹೀಗೆ ಬೇರೆಯವರ ಚುನಾವಣೆಯನ್ನು ನಾನು ಮಾಡಿದ್ದೀನಿ. ನನ್ನ ಚುನಾವಣೆ ಮಾಡುವುದು ನನಗೆ ಗೊತ್ತಿಲ್ಲವಾ? ಎನ್ನುವ ಮೂಲಕ ಡಮ್ಮಿ ಎಂದವರಿಗೆ ಮಹಮ್ಮದ್ ಶಾಲಂ ತೀರುಗೇಟು ನೀಡಿದರು.
![]() |
![]() |
![]() |
![]() |
![]() |
[ays_poll id=3]