K2kannadanews.in
Crime News ಮಾನ್ವಿ : ರಾಯಚೂರು ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರನ್ನ ಗುರಿಯಾಗಿಸಿಕೊಂಡು, ಜಾತ್ರೆ, ಉರುಸ್, ಸಂತೆಗಳಲ್ಲಿ ವಿಷಪೂರಿತ ಕಲಬೆರಕೆ ಆಹಾರಗಳನ್ನ ಮಾರಾಟ ಮಾಡುವ ಜಾಲ ಮಾನ್ವಿ ಪಟ್ಟಣದಲ್ಲಿ ಪತ್ತೆಯಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಇಸ್ಲಾಂನಗರದಲ್ಲಿ ಇಂತಹ ಘಟನೆಯೊಂದು ಜರುಗಿದೆ. ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸಾಕಷ್ಟು ಪ್ರಮಾಣದ ಕಲಬೆರಿಕೆ, ವಿಷ ಪೂರಿತ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಖಾಲಿ ನಿವೇಷನದಲ್ಲಿ ಜೀವಮಾರಕ ರಾಸಾಯನಿಕ ಬಣ್ಣಗಳ ಮಿಶ್ರಿತ ಕಡಲೆ ಬೇಳೆ, ಮಸಾಲ ಪದಾರ್ಥಗಳು ಜಪ್ತಿ ಮಾಡಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳಿಗೆ ರಾಸಾಯನಿಕ ಬಣ್ಣಬೆರೆಸಿ ಮಾರಾಟ ಮಾಡುವ ದಂಧೆ ಇದಾಗಿದ್ದು, ಖಾಲಿ ನಿವೇಶನದಲ್ಲಿ ಬಣ್ಣ ಮಿಶ್ರಿತ ಬೇಳೆ, ಮಸಾಲ ಪದಾರ್ಥಗಳನ್ನ ಒಣಗಲು ಹಾಕಿದ್ದರು ದಂಧೆಕೊರರು. ಇದನ್ನ ಗಮನಿಸಿದ ಸಾರ್ವಜನಿಕರಿಂದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆಹಾರ ಸುರಕ್ಷಾಧಿಕಾರಿ ಗುರುರಾಜ್ ಕಟ್ಟಿಮನಿ ನೇತೃತ್ವದಲ್ಲಿ ದಾಳಿ ಮಾಡಿ ಕಲಬೆರಿಕೆ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.
ದಾಳಿ ವೇಳೆ 367 ಕೆಜಿ ಕಲಬೆರಕೆ ದನಿಯಾ ಕಾಳು, 152 ಕೆಜಿ ಕೆಂಪು ಮಿಶ್ರಿತ ಕಡ್ಲೆ , 220 ಕೆಜಿ ಅರಸಿಣ ಬಣ್ಣ ಮಿಶ್ರಿತ ಬೇಳೆ, ಪಪ್ಪಾಯಿ ಬೀಜ, ಚಕ್ಕೆ ,ಕೊಬ್ಬರಿ ಪುಡಿ ಸೇರಿ ಒಟ್ಟು 842 ಕೆ.ಜಿ ಯಷ್ಟು ಕಲಬೆರಿಕೆ ಆಹಾರ ಪದಾರ್ಥಗಳು ಜಪ್ತಿ ಮಾಡಿದ್ದಾರೆ. ಜಪ್ತಿಯಾದ ಆಹಾರ ಪದಾರ್ಥಗಳನ್ನ ಎಫ್ ಎಸ್ ಎಲ್ ಲ್ಯಾಬ್ ಗೆ ಅಧಿಕಾರಿಗಳು ಕಳುಹಿಸಿದ್ದಾಋ. ದಂಗೆಕೋರರು ಸ್ಥಳದಿಂದ ಪರಾರಿಯಾಗಿದ್ದು, ಜಾತ್ರೆ , ಉತ್ಸವಗಳಿಗೆ ಕಲಬೆರಿಕೆ ಆಹಾರ ಪದಾರ್ಥ ಸರಬರಾಜು ಮಾಡುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ.