K2Kannadanews.in
Crime News ರಾಯಚೂರು : ನಗರದ ವಾಸವಿನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು ಪತಿಯೇ ಕೊಲೆ ಮಾಡಿ ಬಳಿಕ ನೇಣು ಹಾಕಿದ್ದಾನೆ ಅಂತ ಆರೋಪಿಸಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಮೃತಳ ಪತಿ ಜಂಬನಗೌಡ ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಬಿಸಿದ್ದಾರೆ.
35 ವರ್ಷದ ಪ್ರಸನ್ನ ಲಕ್ಷ್ಮೀ ಶವ ನೇಣುಬಿಗಿದ ಸ್ಥತಿಯಲ್ಲಿ ದೊರೆತಿತ್ತು. ಕುಡಿದು ಬಂದು ಡೈವರ್ಸ್‌ಗಾಗಿ ನಿತ್ಯ ಪೀಡಿಸುತ್ತಿದ್ದ ಜಂಬನಗೌಡ, ಮದುವೆಯಾಗಿ 16 ವರ್ಷಗಳ ಬಳಿಕ ಡೈವರ್ಸ್‌ಗಾಗಿ ಪೀಡಿಸುತ್ತಿದ್ದ ಅಂತ ಆರೋಪಿಸಲಾಗಿತ್ತು. 14 ದಿನಗಳ ಹಿಂದೆಯಷ್ಟೇ ಮನೆ ಬದಲಾಯಿಸಿ ಕುಟುಂಬ ಬಾಡಿಗೆ ಮನೆಗೆ ಶಿಫ್ಟ ಆಗಿದ್ದರು. ಕೌಟುಂಬಿಕ ಕಲಹದ ಹಿನ್ನಲೆ ಕಳೆದ ಒಂದು ವಾರದಿಂದ ಜಂಬನಗೌಡ ಕುಟುಂಬದಿಂದ ದೂರ ಉಳಿದಿದ್ದ.
ಪತಿ ಕಿರುಕುಳ ವಿರುದ್ದ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಿಸಲು ಮಹಿಳೆ ಮುಂದಾಗಿದ್ದರು ಆಗ ಪೊಲೀಸರು ಆಕೆಯ ದೂರು ಪಡೆದಿಲ್ಲ ಎಂಬ ಗಂಭೀರ ಆರೋಪವು ಕೇಳಿ ಬಂದಿತ್ತು. ರಾತ್ರಿ ವೇಳೆ ಮಕ್ಕಳು ಹೊರಗಡೆ ಹೋಗಿದ್ದಾಗ ಘಟನೆ ನಡೆದಿತ್ತು ,ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
ಇನ್ನು ಗಂಡ, ಅತ್ತೆ, ಮಾವನ ಕಿರುಕುಳದಿಂದಲೇ ಘಟನೆ ನಡೆದಿದೆ ಅಂತ ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,ಪತಿ ಸೇರಿ ಕುಟುಂಬದ 6 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇನ್ನೂ ದಾಖಲಾಗುತ್ತಿದ್ದಂತೆ ಪತಿ ಜಂಬನಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಆರಂಬಿಸಿದ್ದಾರೆ.