This is the title of the web page
This is the title of the web page
Crime NewsState News

ನೇಣು ಬಿಗಿದು ಪತ್ನಿಯನ್ನು ಕೊಂದ ಪತಿ..?


K2kannadanews.in

ಸಿಂಧನೂರು : ಕೌಟುಂಬಿಕ ಕಲಹ(Family feud ಹಿನ್ನಲೆ ಪತಿ(hasbend) ಪತ್ನಿಯನ್ನು(wife) ನೇಣು ಬಿಗಿದು ಕೊಲೆ ಮಾಡಿದ ಘಟನೆ ನಗರದ ಪಟೇಲವಾಡಿಯಲ್ಲಿ ನಡೆದಿದ್ದು ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಂಧನೂರು(sindhnoor) ನಗರದ ಪಟೇಲವಾಡಿಯಲ್ಲಿ ಘಟನೆ ನಡೆದಿದ್ದು, ಪತಿ ನಾಗರಾಜ(nagaraj) ನನ್ನು ವಶಕ್ಕೆ ಪಡೆಯಲಾಗಿದೆ. ನಗರದ ನಟರಾಜ ಕಾಲೊನಿಯ ಭುವನೇಶ್ವರಿ(31)(bhuvaneshwari) ಮೃತ ದುರ್ದೈವಿ. ತಾಲ್ಲೂಕಿನ ಹೊಸಳ್ಳಿ ಇ.ಜೆ ಗ್ರಾಮದ ನಾಗರಾಜ ಹಾಗೂ ಭುವನೇಶ್ವರಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ(love marriage) ಆಗಿ 14 ವರ್ಷಗಳಾಗಿದೆ. ಇಬ್ಬರು ಪುತ್ರಿಯರಿದ್ದಾರೆ. ಆರಂಭದ ಮೂರ್ನಾಲ್ಕು ವರ್ಷ ಸುಖವಾಗಿದ್ದರು. ನಂತರದ ದಿನಗಳಲ್ಲಿ ಪತಿ ನಾಗರಾಜ ಪ್ರತಿನಿತ್ಯ ಮದ್ಯ ಸೇವಿಸಿ ಪತ್ನಿಗೆ ಹೊಡೆದು ದೌರ್ಜನ್ಯ(Atrocity) ನಡೆಸಿ, ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದರು. ಈ ಕುರಿತು ಅನೇಕ ಬಾರಿ ಹಿರಿಯರು ಬುದ್ಧಿ ಹೇಳಿದರೂ ಸರಿಪಡಿಸಿಕೊಂಡಿರಲಿಲ್ಲ ಎಂದು ಮೃತ ಭುವನೇಶ್ವರಿ ತಾಯಿ ಲಲಿತಮ್ಮ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಹೊಸಳ್ಳಿ ಇ.ಜೆ ಗ್ರಾಮ ಬಿಟ್ಟು ನಗರದ ಪಟೇಲವಾಡಿಯ ಬಾಡಿಗೆ ಮನೆಯಲ್ಲಿ(rented house) ವಾಸವಿದ್ದರು. ಇಲ್ಲಿಯೂ ಪ್ರತಿನಿತ್ಯ ದುಡಿಯದೆ, ಮದ್ಯಸೇವಿಸಿ ಬಂದು ಜಗಳ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಪತ್ನಿ ಭುವನೇಶ್ವರಿಗೆ ಹೊಡೆದಿದ್ದು, ಪ್ರಜ್ಞೆ ತಪ್ಪಿ ಬಿದ್ದಾಗ ಕೊರಳಿಗೆ ನೇಣು ಬಿಗಿದು ಕೊಲೆ(murder) ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ ತನಿಖೆ ಕೈಗೊಂಡಿದ್ದಾರೆ.


[ays_poll id=3]