K2kannadanews.in
Wife jumped to river ಕಲಬುರಗಿ : ಆತ್ಮಹತ್ಯೆ ಮಾಡಿಕೊಳ್ಳಲು (Self harming attempt) ಭೀಮಾ ನದಿಗೆ (Bhima River) ಹಾರಿ ಕೊಚ್ಚಿ ಹೋಗುತ್ತಿದ್ದ ಪತ್ನಿಯನ್ನು ರಕ್ಷಣೆಗೆ (Rescue) ಹೋದ ಇಬ್ಬರು ಪತಿ ಮತ್ತು ಸಂಬಂದಿ ನೀರುಪಾಲಾಗಿದ್ದು (Drowned), ಪತ್ನಿಯನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afjalpura) ತಾಲೂಕಿನ ಸೊನ್ನ ಗ್ರಾಮದ ಬಳಿಯ ಭೀಮಾ ಬ್ರಿಡ್ಜ್ (Bridge) ಸಮೀಪ ನಡೆದಿದೆ. ಪತ್ನಿ ಲಕ್ಷ್ಮೀ(28) ನದಿಗೆ ಹಾರಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದರು. ಪತ್ನಿ (Wife) ನದಿಗೆ ಹಾರಿದ್ದನ್ನು ಕಂಡು ಲಕ್ಷ್ಮಿಯ ಗಂಡ (Hasbeand) ಶಿವಾನಂದ್ ಹಾಗೂ ಸಂಬಂದಿ ರಾಜೂ ಆಕೆಯನ್ನು ರಕ್ಷಿಸಲು (Rescue) ನದಿಗೆ ಜಂಪ್ ಮಾಡಿದ್ದರು. ನದಿಯ ಬಳಿ ಇದ್ದ ಮೀನುಗಾರರು (fisherman) ಲಕ್ಷ್ಮಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಲಕ್ಷ್ಮೀ ರಕ್ಷಣೆಗೆ ಹೋದ ಗಂಡ ಹಾಗೂ ಸಂಬಂಧಿ ನೀರು (water) ಪಾಲಾಗಿದ್ದಾರೆ. ಕೌಟುಂಬಿಕ ಕಲಹದ (Family problem) ಹಿನ್ನೆಲೆಯಲ್ಲಿ ಶಿವಾನಂದ ಪತ್ನಿ ಲಕ್ಷ್ಮಿ ಭಿಮಾ ನದಿಗೆ ಹಾರಿದ್ದಳು.
ಅಫಜಲಪುರ ತಾಲೂಕಿನ ಕಡಣಿ ಗ್ರಾಮದ ನಿವಾಸಿಗಳಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಅಫಜಲಪುರ ಪೊಲೀಸರು ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಶವ ಪತ್ತೆ ಹಚ್ಚಿದ್ದಾರೆ. ಕಲಬುರಗಿ (Kalburgi) ಖಾಸಗಿ ಆಸ್ಪತ್ರೆಯಲ್ಲಿ (private hospital) ಲಕ್ಷ್ಮಿಗೆ ಚಿಕಿತ್ಸೆ ಕೊಡಿಸಲಾಗಿದೆ. ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.