ಐತಿಹಾಸಿಕ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹುಂಡಿ ಕಳುವು

K 2 Kannada News
ಐತಿಹಾಸಿಕ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹುಂಡಿ ಕಳುವು
WhatsApp Group Join Now
Telegram Group Join Now

K2kannadanews.in

Crime News ಮಸ್ಕಿ : ಐತಿಹಾಸಿಕ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದ ಬಾಗಿಲು ಮುರಿದು ಹುಂಡಿ ಹೊತ್ತೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಬೆಟ್ಟದ ಮೇಲಿನ ಜಡೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಘಟನೆ ನಡೆದಿದೆ. ರಾತ್ರಿ ಪೂಜೆ ನಂತರ ದೇವಸ್ಥಾನದ ಬಾಗಿಲು ಹಾಕಿಕೊಂಡು ಹೋಗಲಾಗಿತ್ತು. ರಾತ್ರಿ ಯಾರು ಇಲ್ಲದ ಸಮಸಯ ನೋಡಿ ಖದಿಮರು ದೇವಸ್ಥಾನದ ಕಬ್ಬಿಣದ ಬಾಗಿಲು ಮುರಿದು ಹುಂಡಿ ಹೊತ್ತೊಯ್ದಿದ್ದಾರೆ.

ಇನ್ನೂ ಬೆಳಿಗ್ಗೆ ದೇವಸ್ಥಾನದ ಅರ್ಚಕರು ಎಂದಿನಂತೆ ಪೂಜೆ ಸಲ್ಲಿಸಲು ಹೋದಾಗ ಬಾಗಿಲು ಮುರಿದಿರುವುದು ಪತ್ತೆಯಾಗಿದೆ. ಭಕ್ತರು ದೇಣಿಗೆ ಹಾಕುತ್ತಿದ್ದ ಹುಂಡಿ ಹೊತ್ತೊಯ್ದು ಮುರಿದು ಅದರಲ್ಲಿನ ಹಣ ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ. ಕೂಡಲೇ ದೇವಸ್ಥಾನದ ಅರ್ಚಕರು ಸಮಿತಿ ಮುಖಂಡರಿಗೆ ಮಾಹಿತಿ ನೀಡಿದ್ದಾರೆ. ಹುಂಡಿಯಲ್ಲಿ ಎಷ್ಟು ಹಣ ಜಮೆ ಆಗಿತ್ತು ಎಂಬ ಬಗ್ಗೆ ತಿಳಿದಿಲ್ಲ‌. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

WhatsApp Group Join Now
Telegram Group Join Now
Share This Article