
K2 ನ್ಯೂಸ್ ಡೆಸ್ಕ್ : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು. ಈ ವೇಳೆ 3.53 ಕೋಟಿ ಸಂಗ್ರಹಣೆಯಾಗಿದ್ದು, ಇತಿಹಾಸದಲ್ಲಿಯೇ ಇದೇ ಮೊದಲಬಾರಿಗೆ ಇಷ್ಟು ಮೊತ್ತ ಸಂಗ್ರಹವಾಗಿದೆ ಎಂದು ಮಠವು ಪ್ರಕಟಣೆ ತಿಳಿಸಿದೆ.
ಮಂತ್ರಾಲಯದ ರಾಯರ ದರ್ಶನಕ್ಕೆ ಬರುವಂತಹ ಭಕ್ತರು ದರ್ಶನದ ವೇಳೆ ಹುಂಡಿಗೆ ತಮ್ಮ ಕಾಣಿಕೆಯನ್ನು ಅರ್ಪಿಸುತ್ತಾರೆ. ಹೀಗೆ ಪ್ರತಿ ತಿಂಗಳು ಕೂಡ ಮಠದಲ್ಲಿ ಸಂಗ್ರಹವಾದ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಅಂತೆಯೇ ಮೇ ತಿಂಗಳು ಸೇರಿ 34 ದಿನಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಎಣಿಕೆ ಮಾಡಲಾಯಿತು. 3,46,20,432 ಮೌಲ್ಯದ ನೋಟುಗಳು, 7,59,420 ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು ₹3,53, 79,852 ದೇಣಿಗೆ ಸಂಗ್ರಹವಾಗಿದೆ. ಅಲ್ಲದೇ 197 ಗ್ರಾಂಗಳಷ್ಟು ಚಿನ್ನ, 1.187 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ ಎಂದು ಮಠವು ತಿಳಿಸಿದೆ.
![]() |
![]() |
![]() |
![]() |
![]() |
[ays_poll id=3]