This is the title of the web page
This is the title of the web page
Local News

ನರೇಗಾ ಯೋಜನೆಯಡಿ ಭಾರಿ ಅವ್ಯವಹಾರ


ರಾಯಚೂರು : ಜಿಲ್ಲೆಯಲ್ಲಿ ಬರುವ ಎಲ್ಲ ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಭಾರಿ ಅವ್ಯವಹಾರ ನಡೆಯುತ್ತಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಆಲ್ದರ್ತಿ ಒತ್ತಾಯಿಸಿದರು.

ನರೇಗಾ ಕಾಮಗಾರಿಗಳನ್ನು ನಿರ್ವಹಿಸಿದವರು ಕೆಲಸ ಮಾಡದವರ ಅಕೌಂಟ್‌ಗಳಿಗೆ ದುಡ್ಡು ಹಾಕಿ ನಂತರ ತಮ್ಮ ಖಾತೆಗೆ ಜಮಾಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ಫಲಾನುಭವಿಗಳಿಗೆ ಕೆಲಸ ನೀಡುವ ಮುನ್ನ ನಾನಾ ರೀತಿಯ ನೆಪಗಳನ್ನು ಹೇಳುವ ಅಧಿಕಾರಿಗಳು, ಕೆಲಸ ಮಾಡದಿರುವವರ ಖಾತೆಗೆ ಹಣ ಹಾಕುವುದಕ್ಕೆ ಯಾವುದೇ ಅಡೆತಡೆಗಳು ಬರುವುದಿಲ್ಲವೇಕೆ ಎಂಬ ಪ್ರಶ್ನೆ ಎದುರಾಗುತ್ತದೆ. ಇವೆಲ್ಲವುಗಳನ್ನು ಪರಿಶೀಲನೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಸಬೇಕು.

ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಂಬಂಧಪಟ್ಟ ಜೆ.ಇ. ಸೇರಿಕೊಂಡು ತಮಗೆ ಬೇಕಿದ್ದಂತಹ ವ್ಯಕ್ತಿಗಳಿಗೆ ಕೆಲಸ ಕೊಟ್ಟು ಪರ್ಸೆಂಟೇಜ್ ನಿಗದಿ ಪಡಿಸಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು. ಈಗ ಮೊದಲ ದೇವದುರ್ಗ ತಾಲೂಕಿನ ಗ್ರಾಮ ಪಂಚಾಯಿತಿಗಳ ಅವ್ಯವಹಾರಗಳ ದಾಖಲಾತಿಗಳನ್ನು ಕಲೆ ಹಾಕಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಹೇಳಿದರು.


[ays_poll id=3]