K2kannadanews.in
Crime News ರಾಯಚೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಶುಕ್ರವಾರ ರಾಯಚೂರು ಜಿಲ್ಲೆಯಲ್ಲೂ ಹಲವು ಕಡೆ ಭಾರಿ ಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಆಗುದ್ದು, ಈ ವೇಳೆ ಸಿಡಿಲಿಗೆ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದು, ಎರಡು ರಾಸುಗಳು ಮೃತಪಟ್ಟಿವೆ.
ಹೌದು ಬಿಸಿಲಿಗೆ ಕಾದು ಕೆಂಡದಂತಾಗಿದ್ದ ರಾಯಚೂರಿನಲ್ಲಿ ಮೇರಾಯ ತಂಪೆರೆದಿದ್ದು, ಜೊತೆಗೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ. ರಾಯಚೂರು ತಾಲ್ಲೂಕಿನ ಉಡುಮಗಲ್ ಹಾಗೂ ಮರ್ಚಟ್ಹಾಳ್ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದು, ಮಸ್ಕಿಯಲ್ಲಿ ರಾಸುಗಳು ಮೃತಪಟ್ಟಿವೆ.
ಉಡಗಮಗಲ್ ಗ್ರಾಮದ ನಿವಾಸಿಯಾದ ಮಲ್ಲಮ್ಮ ಕುರಿಗಳನ್ನು ಮೆಯಿಸಿಕೊಂಡು ಮರಳಿ ಬರುವ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅತ್ತ ಮರ್ಚಟ್ಹಾಳ್ ಗ್ರಾಮದಲ್ಲಿ ರೈತ ಹನುಮಂತ ಯಾದವ್, ದಿನ್ನಿ ರಸ್ತೆಯ ಬಳಿ ಇರುವ ಹೊಲದಲ್ಲಿ ಜೆಸಿಬಿ ಮೂಲಕ ಬದು ತೆಗೆಸುವ ಕಾರ್ಯ ಮಾಡಿಸುತ್ತಿದ್ದ, ಈ ವೇಳೆ ಏಕಾಏಕಿ ಗಾಳಿ, ಮಳೆ ಶುರುವಾದ ಕಾರಣಕ್ಕೆ ಮರದಡಿ ಆಶ್ರಯ ಪಡೆದಿದ್ದಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಎರಡು ಪ್ರತ್ಯೇಕ ಘಟನಾ ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇನ್ನೊಂದೆಡೆ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದಲ್ಲಿ ಸಿಡಿಲಿಗೆ ಒಂದು ಹೆಮ್ಮೆ ಮತ್ತು ಒಂದು ಹಸು ಮೃತಪಟ್ಟಿದೆ. ಇನ್ನು ಪಶು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ ಜಿಲ್ಲೆಯಾದ್ಯಂತ ಮಳೆರಾಯ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ.