ರಾಯಚೂರು ನಗರ ಮತ್ತು ಕೆಲ ಗ್ರಾಮಾಂತರ ಭಾಗದಲ್ಲಿ ಭಾರಿ ಮಳೆ..

K 2 Kannada News
ರಾಯಚೂರು ನಗರ ಮತ್ತು ಕೆಲ ಗ್ರಾಮಾಂತರ ಭಾಗದಲ್ಲಿ ಭಾರಿ ಮಳೆ..
WhatsApp Group Join Now
Telegram Group Join Now

K2kannadanews.in

Heavy rain ರಾಯಚೂರು : ರಾಯಚೂರು ನಗರ ಮತ್ತು ಕೆಲ ಗ್ರಾಮಾಂತರ ಭಾಗದಲ್ಲಿ ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರವಾಸಿಗಳು ಕೂಲ್ ಆಗಿದ್ದಾರೆ.

ರಾಯಚೂರು ನಗರ ಮತ್ತು ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ಭಾರಿ ಬಿಸಿಲಿನಿಂದಾಗಿ ಜನ ಕಂಗೆಟ್ಟಿದ್ದರು. ಈ ವೇಳೆ ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿರುವ ಬಾರಿ ಗಾಳಿ ಮತ್ತು ಗುಡುಗು ಸಮೇತ ಮಳೆಯಿಂದಾಗಿ ರಾಯಚೂರು ನಗರದ ಸೇರಿದಂತೆ ಗ್ರಾಮಾಂತರ ಭಾಗಗಳಿಗೆ ಮಳೆರಾಯ ತಂಪೆರದಿದ್ದಾನೆ.

ಇನ್ನು ಗ್ರಾಮಾಂತರ ಭಾಗದಲ್ಲಿ ಮಳೆಯಿಂದಾಗಿ ರೈತರ ಮುಖದಲ್ಲಿ ಖುಷಿ ಅರಳಿದೆ. ಹತ್ತಿ, ಮೆಣಸಿನ ಕಾಯಿ, ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ಇದೀಗ ನೀರಿನ ಅವಶ್ಯಕತೆ ಇತ್ತು. ಮಳೆಯಿಂದಾಗಿ ಬೆಳೆಗಳಿಗೆ ನೀರು ಸಿಕ್ಕಂತಾಗಿದೆ.

WhatsApp Group Join Now
Telegram Group Join Now
Share This Article