K2kannadanews.in
Crime News ತ್ರಿಪುರ : ಅಪ್ರಾಪ್ತ ಬಾಲಕರ (minor boys) ಕೈಯಲ್ಲಿ ಮೊಬೈಲ್ (mobile) ಬಳಕೆ ಹೆಚ್ಚಾದಗಿನಿಂದ ಅಪರಾಧ (Crime) ಕೃತ್ಯಗಳು ಹೆಚ್ಚಾಗಿವೆ. ಅದರಲ್ಲೂ ಅತ್ಯಾಚಾರ (Rape case) ಪ್ರಕರಣಗಳು ಹೆಚ್ಚುತ್ತಿವೆ. ಅಪ್ರಾಪ್ತ ಬಾಲಕಿಯ ಮೇಲೆ 2 ಅಪ್ರಾಪ್ತರು ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯ ಖಾಸಗಿ ಅಂಗಗಳಿಗೆ ಬಿಸಿನೀರು (Hot water) ಸುರಿದ ಹೃದಯವಿದ್ರಾವಕ ಘಟನೆ ತ್ರಿಪುರಾದಲ್ಲಿ ನಡೆದಿದೆ.
ಕಳೆದ ಆಗಸ್ಟ್ 28 ರಂದು ತ್ರಿಪುರಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯ ಖಾಸಗಿ ಅಂಗಗಳಿಗೆ ಬಿಸಿನೀರು ಸುರಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಅಪ್ರಾಪ್ತ ಬಾಲಕರನ್ನು ಬಾಲಾಪರಾಧಿಗೃಹದಲ್ಲಿ ಇರಿಸಲಾಗಿದೆ. ದೂರಿನ ಅನ್ವಯ ಬಾಲಕಿ ಅಪ್ರಾಪ್ತರೊಬ್ಬರೊಂದಿಗೆ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆ ಪ್ರತಿಭಟಿಸಿದಾಗ ಆರೋಪಿಯೊಬ್ಬ ಆಕೆಯ ಖಾಸಗಿ ಅಂಗಗಳಿಗೆ ಬಿಸಿನೀರು ಸುರಿದಿದ್ದಾನೆ. ಬಳಿಕ ಆಕೆಯನ್ನು ದುಷ್ಕರ್ಮಿಗಳು ಮನೆಗೆ ಡ್ರಾಪ್ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.