K2kannadanews.in
Health tips ಆರೋಗ್ಯ ಭಾಗ್ಯ : ಇತ್ತೀಚಿನ ದಿನದಲ್ಲಿ ನಾವು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಕ್ಕೆ ನಾವು ಸೇವಿಸುವ ಆಹಾರವೂ ಸಹ ಒಂದು ಕಾರಣವಾಗಿರುತ್ತದೆ. ನಾವು ಸೇವಿಸು ಆಹಾರದಲ್ಲಿ ಎಲ್ಲಾ ವಿಟಮಿನ್‌ಗಳು, ಅಗತ್ಯ ಪೋಷಕಾಂಶಗಳು ಇವೆಯೇ ಎಂಬುದನ್ನು ಸಹ ಖಚಿತ ಮಾಡಿಕೊಳ್ಳಬೇಕು.
ಇನ್ನು ನಾವು ಸದೃಢ ಆರೋಗ್ಯಕ್ಕಾಗಿ ಮೊಳಕೆ ಕಾಳುಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಈ ಅಭ್ಯಾಸ ಇಲ್ಲದವರು ಮೊಳಕೆ ಕಾಳುಗಳ ಸೇವಿಸುವ ಅಭ್ಯಾಸ ಇನ್ನುಮುಂದೆ ಆದರೂ ಬೆಳೆಸಿಕೊಳ್ಳಿ. ಏಕೆಂದರೆ ಈ ಮೊಳಕೆ ಕಾಳುಗಳಲ್ಲಿ ಎಲ್ಲಿಲ್ಲದ ಪೋಷಕಾಂಶವಿರುತ್ತದೆ. ನಿಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಜೊತೆ ಪೋಷಕಾಂಶಗಳು ಸಿಗುತ್ತವೆ. ಮುಖ್ಯವಾಗಿ ಈ ಲಾಭಗಳು ನಮ್ಮ ದೇಹಕ್ಕೆ ಅಗತ್ಯವಾಗಿವೆ.
ಹೃದಯಕ್ಕೆ ಬಹಳ ಉಪಯಕ್ತ : ಪ್ರತಿದಿನ ಬೆಳಗ್ಗೆ ಒಂದು ತಟ್ಟೆ ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಿದರೆ ಹೃದಯ ಆರೋಗ್ಯವಾಗಿರುತ್ತದೆ. ಇದು ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ, ಇದು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಕಣ್ಣುಗಳಿಗೆ ಉತ್ತಮೌಷಧ : ನಿಮ್ಮ ದೃಷ್ಟಿ ಸುಧಾರಿಸಲು ನೀವು ಬಯಸಿದರೆ, ಮೊಳಕೆಯೊಡೆದ ಕಾಳನ್ನು ಪ್ರತಿದಿನ ಸೇವಿಸಿ. ವಿಟಮಿನ್ ಎ ಇದರಲ್ಲಿ ಕಂಡುಬರುವ ಕಾರಣ, ಇದು ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನ ಉತ್ತಮ ಮೂಲವಾಗಿದೆ. ಇವು ಉತ್ಕರ್ಷಣ ನಿರೋಧಕಗಳು, ಇದು ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ.
ದೇಹದಲ್ಲಿ ರಕ್ತ ಹೆಚ್ಚಿಸಲಿದೆ : ನಿಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದರೆ, ಮೊಳಕೆಯೊಡೆದ ಕಾಳನ್ನು ಪ್ರತಿದಿನ ಸೇವಿಸಲು ಪ್ರಾರಂಭಿಸಿ. ಏಕೆಂದರೆ ಇದರಲ್ಲಿ ಕಂಡುಬರುವ ಕಬ್ಬಿಣಾಂಶವು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ರಕ್ತವು ವೇಗವಾಗಿ ಉತ್ಪತ್ತಿಯಾಗುತ್ತದೆ. ಜೊತೆಗೆ ಹಿಮೋಗ್ಲೋಬಿನ್ ಹೆಚ್ಚಲು ಸಹ ಕಾರಣವಾಗುತ್ತದೆ.
ಜೀರ್ಣ ಶಕ್ತಿ ಉತ್ತಮವಾಗುತ್ತದೆ : ನಿಮ್ಮ ಜೀರ್ಣ ಶಕ್ತಿ ಸರಿಯಾಗಿ ಕೆಲಸ ಮಾಡದಿದ್ದರೆ ಇಂದಿನಿಂದಲೇ ಮೊಳಕೆ ಬರಿಸಿದ ಕಾಳುಗಳ ಸೇವಿಸಲು ಆರಂಭಿಸಿ. ಏಕೆಂದರೆ ಇದು ಜೀರ್ಣಕ್ರಿಯೆಗೆ ಉತ್ತಮವಾದ ಗರಿಷ್ಠ ಫೈಬರ್ ಅನ್ನು ಹೊಂದಿರುತ್ತದೆ. ಇದರಿಂದ ನಿಮ್ಮ ಕರುಳಿನ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ.
ತೂಕವನ್ನು ಇಳಿಸಲು ಸಹಕಾರಿ : ನಿಮ್ಮ ಹೆಚ್ಚುತ್ತಿರುವ ತೂಕದಿಂದ ನೀವು ತೊಂದರೆಗೊಳಗಾಗಿದ್ದರೆ, ಪ್ರತಿದಿನ ಬೆಳಿಗ್ಗೆ ಮೊಳಕೆಯೊಡೆದ ಕಾಳನ್ನು ತಿನ್ನಿರಿ. ಹೀಗೆ ಮಾಡುವುದರಿಂದ ನಿಮ್ಮ ತೂಕ ಬಹಳ ಬೇಗ ಕಡಿಮೆಯಾಗುತ್ತದೆ. ಏಕೆಂದರೆ ಮೊಳಕೆಯೊಡೆದ ಕಾಳಿನಲ್ಲಿ ಅತ್ಯಂತ ಕಡಿಮೆ ಕ್ಯಾಲೋರಿಗಳು ಕಂಡುಬರುತ್ತವೆ. ಇದರಲ್ಲಿ ನಾರಿನ ಪ್ರಮಾಣ ಮಾತ್ರ ಹೆಚ್ಚಾಗಿರುತ್ತದೆ. ಇದನ್ನು ಸೇವಿಸಿದರೆ ಹಸಿವಾಗುವುದು ಕಡಿಮೆಯಾಗುತ್ತದೆ. ಹಸಿವು ಕಡಿಮೆಯಾದರೆ ನೀವು ತಿನ್ನುವುದನ್ನು ಕಡಿಮೆ ಮಾಡುತ್ತೀರಿ. ಹೀಗಾದಾಗ ನಿಮ್ಮ ತೂಕವೂ ಸಹ ಕಡಿಮೆಯಾಗುತ್ತದೆ.