ಹುಚ್ಚು ಸಾಹಸ ತೋರಿಸಲು ಹೋಗಿ ನೂರಾರು ಜನರ ಮುಂದೆಯೇ ಮುಳುಗಿ ಸಾವು..

K 2 Kannada News
ಹುಚ್ಚು ಸಾಹಸ ತೋರಿಸಲು ಹೋಗಿ ನೂರಾರು ಜನರ ಮುಂದೆಯೇ ಮುಳುಗಿ ಸಾವು..
Oplus_131072
WhatsApp Group Join Now
Telegram Group Join Now

K2kannadanews.in

Reels craze ನಾಗ್ಪುರ : ಹುಚ್ಚು ಸಾಹಸದ (crazy stunt) ಮೂಲಕ ರೀಲ್ಸ್ (reels) ಮಾಡಲು ಹೋಗಿ ಅದೆಷ್ಟು ಯುವಕ (Many youths) ಯುವತಿಯರು (Women) ಸಾವನ್ನಪ್ಪಿದ್ದಾರೆ. ಬುದ್ಧಿ ಕಲಿಯದೆ ಮತ್ತೆ ಮತ್ತೆ ಅದೇ ಸಾಹಸಕ್ಕೆ ಹೋಗಿ ಜೀವ ಕಳೆದುಕಿಳ್ಳುತ್ತಿದ್ದಾರೆ. ನೂರಾರು ಪ್ರವಾಸಿಗರ (tourist) ಎದುರಲ್ಲೆ ಜಲಾಶಯದ (Dam water) ನೀರಿನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ (Dies) ಘಟನೆ ನಾಗ್ಪುರದಲ್ಲಿ ನಡೆದಿದೆ.

ಹೌದು ಮಹಾರಾಷ್ಟ್ರದ (Maharashtra) ನಾಗ್ಪುರದ (Nagpur) ಉಮ್ರೆಡ್‌ ಪಟ್ಟಣದ ಸಮೀಪವಿರುವ ಮಕರಧೋಕ್ಡಾ ಅಣೆಕಟ್ಟಿನಲ್ಲಿ ಘಟನೆ ನಡೆದಿದೆ. ಈ ಒಂದು ವೀಡಿಯೋವನ್ನು X ನಲ್ಲಿ TIND Posting ಖಾತೆಯಿಂದ ಅಪ್ ಲೋಡ್ (Uplode) ಮಾಡಲಾಗಿದೆ. ವೀಡಿಯೋದಲ್ಲಿ (Video) ಕಾಣುವಂತೆ, ಮೂವರು ಯುವಕರು ಅಣೆಕಟ್ಟು ವೀಕ್ಷಣೆಗೆ ಆಗಮಿಸಿ ಸ್ಟಂಟ್‌ ಮಾಡಲು ಮುಂದಾಗಿದ್ದಾರೆ. ಅಣೆಕಟ್ಟಿನ ಇಳಿಜಾರಿದ್ದ ಒಡ್ಡಿನ ಮೇಲೆ ಹತ್ತಿ ಪ್ರಾಣಾಪಾಯ ತಂದುಕೊಂಡಿದ್ದಾರೆ.

ಒಬ್ಬ ಯುವಕ ಒಡ್ಡಿನ ಮೇಲೆ ಹತ್ತಿ, ಇನ್ನಿಬ್ಬರು ಸ್ನೇಹಿತರನ್ನು ಮೇಲೆತ್ತಲು ಯತ್ನಿಸಿದ್ದಾನೆ. ಈ ವೇಳೆ ಇಳಿಜಾರಿದ್ದರಿಂದ ಇಬ್ಬರು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಅಣೆಕಟ್ಟಿನ ಒಡ್ಡಿನ ಮೇಲೆ ನಿಂತಿದ್ದ ಆಯ ತಪ್ಪಿ (Balance out) ಯುವಕ ನೀರಿಗೆ ಬಿದ್ದಿದ್ದಾನೆ. ಆತನಿಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಕೆಲ ಯುವಕರ ಗುಂಪು ಆತನೆಡೆಗೆ ಈಜಿಕೊಂಡು ಬರಲು ಮುಂದಾಗಿದ್ದಾರೆ. ಇಳಿಜಾರಿನ ಮೇಲೆ ಕೂಡಾ ಹತ್ತಲು ಕೆಲ ಯುವಕರು ಹರಸಾಹಸ ಪಟ್ಟಿದ್ದಾರೆ. ಆದರೆ ಹಲವು ಬಾರಿ ಮುಳುಗಿ ಮೇಲೆದ್ದ ಯುವಕ ಕೊನೆಗೆ ಪ್ರಾಣ ಬಿಟ್ಟಿದ್ದಾನೆ.

ಇಂತಹ ಘಟನೆಗಳಿಂದ ಯುವಕರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಸದ್ಯಕ್ಕೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಓಡಾಡುತ್ತಿದೆ.

WhatsApp Group Join Now
Telegram Group Join Now
Share This Article