This is the title of the web page
This is the title of the web page
Sports News

ಕೊನೆಯ ಓವರ್‌ನಲ್ಲಿ 27 ರನ್ ನೀಡಿ ಕೆಟ್ಟ ದಾಖಲೆಯೊಂದು ಬರೆದಿದ್ದಾರೆ


K2 ಸ್ಪೋರ್ಟ್ಸ್ ನ್ಯೂಸ್ : ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೇಗಿ ಅರ್ಷದೀಪ್ ಕೆಟ್ಟ ಬೌಲಿಂಗ್‌ನೊಂದಿಗೆ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ ಕೊನೆಯ ಓವರ್‌ನಲ್ಲಿ ನೋಬಾಲ್ ಸೇರಿ 27 ರನ್ ಬಿಟ್ಟುಕೊಟ್ಟಿದ್ದು. ಈ ಕ್ರಮದಲ್ಲಿ ಅತ್ಯಂತ ಕೆಟ್ಟ ದಾಖಲೆ ಅರ್ಷದೀಪ್ ಹೆಸರಿನಲ್ಲಿ ದಾಖಲಾಗಿದೆ.

ಕೊನೆಯ ಓವರ್ ಬೌಲ್ ಮಾಡಿ ಅವರು 27 ರನ್ ನೀಡಿದ್ದಾರೆ. ಆ ಓವರ್‌ನಲ್ಲಿ 6+ನೋಬಲ್, 6, 6, 4, 0, 2, 2 ರನ್ ಬಂದವು. ಇದರೊಂದಿಗೆ ಟೀಮ್ ಇಂಡಿಯಾಗೆ ಕಿವೀಸ್ 176 ರನ್ ಗಳ ಬೃಹತ್ ಗುರಿ ನೀಡಿದೆ. 4 ಓವರ್ ಎಸೆದ ಅರ್ಷದೀಪ್ ಒಟ್ಟು 51 ರನ್ ಬಿಟ್ಟುಕೊಟ್ಟು, ಒಂದು ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು.

ಕಿವೀಸ್ ವಿರುದ್ಧದ ಮೊದಲ T20 ಪಂದ್ಯದಲ್ಲಿ ಅರ್ಷದೀಪ್ 4 ಓವರ್‌ಗಳಲ್ಲಿ 51 ರನ್ ನೀಡಿದ್ದರು. T20ಯಲ್ಲಿ ಅತಿ ಹೆಚ್ಚು 14 ನೋಬಾಲ್ (22 ಪಂದ್ಯ) ಎಸೆದ ಬೌಲರ್ ಆಗಿ ಮೊದಲ ಸ್ಥಾನದಲ್ಲಿದ್ದಾರೆ. ಹಸನ್ ಅಲಿ (50 ಪಂದ್ಯಗಳಲ್ಲಿ 11), ಕೀಮೋ ಪಾಲ್ (23 ಪಂದ್ಯಗಳಲ್ಲಿ 11) ಮತ್ತು ಓಶನ್ ಥಾಮಸ್ (20 ಪಂದ್ಯಗಳಲ್ಲಿ 11) ನಂತರದ ಸ್ಥಾನದಲ್ಲಿದ್ದಾರೆ.


[ays_poll id=3]