
K2 ನ್ಯೂಸ್ ಡೆಸ್ಕ್ : ಮನೆಯಲ್ಲಿ ಮಕ್ಕಳು ಇದ್ದಾಗ ಏನಾದರೂ ಕುರುಕಲು ತಿಂಡಿ ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ತಂದ ತಿಂಡಿ ತಿನಿಸುಗಳನ್ನು ಕೊಡುವುದಕ್ಕಿಂತ ರಾಗಿಯಿಂದ ಮಾಡಿದ ಈ ಚಕ್ಕುಲಿ ಅವರಿಗೆ ಕೊಡಿ. ಇದು ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು : ½ ಕಪ್- ರಾಗಿ ಹಿಟ್ಟು, ¼ ಕಪ್-ಅಕ್ಕಿ ಹಿಟ್ಟು, 1 ಟೇಬಲ್ ಸ್ಪೂನ್- ಕಡಲೆಹಿಟ್ಟು, 1 ಟೀ ಸ್ಪೂನ್- ಎಣ್ಣೆ, 2 ಚಿಟಿಕೆ-ಇಂಗು, ¼ ಟೀ ಸ್ಪೂನ್-ಓಂ ಕಾಳು, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಒಂದು ಅಗಲವಾದ ಬೌಲ್ ಗೆ ರಾಗಿಹಿಟ್ಟು, ಅಕ್ಕಿಹಿಟ್ಟು, ಕಡಲೆಹಿಟ್ಟು, ಇಂಗು, ಓಂಕಾಳು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಬಿಸಿ ಮಾಡಿದ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ.ನಂತರ ಅದಕ್ಕೆ ಸ್ವಲ್ಪ ಸ್ವಲ್ಪ ಸೇರಿಸಿ ಮುದ್ದೆ ರೀತಿ ಮಾಡಿಕೊಳ್ಳಿ. ಇದು ಸ್ವಲ್ಪ ಗಟ್ಟಿಯಾಗಿರಲಿ. ನಂತರ ಚಕ್ಕುಲಿ ಅಚ್ಚಿಗೆ ಹಾಕಿ ಕಾದ ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಕರಿದರೆ ರುಚಿಯಾದ ರಾಗಿ ಚಕ್ಕುಲಿ ಸವಿಯಲು ಸಿದ್ಧ.
![]() |
![]() |
![]() |
![]() |
![]() |
[ays_poll id=3]