ಹರಿಣಗಳ ಕನಸು ಭಗ್ನ : 6ನೇ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ
![]() |
![]() |
![]() |
![]() |
![]() |
K2 ಸ್ಪೋರ್ಟ್ಸ್ ನ್ಯೂಸ್ : ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಕನಸು ಭಗ್ನವಾಗಿದೆ. ಐಸಿಸಿ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿಯೂ ಬಲಿಷ್ಠ ಆಸ್ಟ್ರೇಲಿಯಾ ಎದುರು ಹರಿಣ ಪಡೆ 19 ರನ್‌ಗಳ ಸೋಲುಂಡಿತು. ಮೆಗ್ ಲ್ಯಾನಿಂಗ್ ಸಾರಥ್ಯದ ಆಸ್ಟ್ರೇಲಿಯಾ ತಂಡ ಆರನೇ ಬಾರಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಅನುಭವಿ ಓಪನರ್ ಬೆತ್ ಮೂನಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ನನಸಾಗಲೇ ಇಲ್ಲ ದಕ್ಷಿಣ ಆಫ್ರಿಕಾದ ಕನಸು ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ದಕ್ಷಿಣ ಆಫ್ರಿಕಾದ ಕನಸು ನುಚ್ಚುನೂರಾಗಿದೆ. ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಬೇಕು ಎಂದುಕೊಂಡಿದ್ದರೂ ಭಾರೀ ಒತ್ತಡಕ್ಕೆ ಸಿಲುಕಿತು. ಹೀಗಾಗಿ ಫೈನಲ್‌ನಲ್ಲಿ ಆಸೀಸ್ ಎದುರು ಸೋಲು ಕಂಡಿತು. ವಿಶ್ವಕಪ್‌ನಲ್ಲಿ ದ. ಆಫ್ರಿಕಾ ಇದುವರೆಗೂ ಸೆಮೀಸ್ ದಾಟಿರಲಿಲ್ಲ. ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಮಹಿಳಾ ತಂಡ ಒತ್ತಡವನ್ನು ಎದುರಿಸಲು ವಿಫಲವಾಗಿ ಕುಸಿಯಿತು. ಇದರೊಂದಿಗೆ ಮತ್ತೊಮ್ಮೆ ದ. ಆಫ್ರಿಕಾ ಒತ್ತಡಕ್ಕೆ ಮಣಿದಂತಾಯಿತು.
![]() |
![]() |
![]() |
![]() |
![]() |