K2kannadanews.in
SHOOKING VIDEO ಮಧ್ಯಪ್ರದೇಶದ : 9ನೇ ತರಗತಿ (standard) ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ (School) ಹಿಂದಿರುಗುತ್ತಿದ್ದಾಗ ಜನನಿಬಿಡ ರಸ್ತೆಯಲ್ಲಿ (road) ತನ್ನ ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ (attempt suicide) ಯತ್ನಿಸಿದ ಘಟನೆ ನಡೆದಿದ್ದು ಈ ಭಯಾನಕ ಘಟನೆಯು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ (CC camera) ಸೆರೆಯಾಗಿದೆ.
ಘಟನೆಯು ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸೆಮಾರಿಯಾ ಪಟ್ಟಣದಲ್ಲಿ ನಡೆದಿದ್ದು, ಘಟನೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಯಾನಕ ದೃಶ್ಯಗಳಲ್ಲಿ ಬಾಲಕಿ ಪದೇ ಪದೇ ಕುತ್ತಿಗೆಗೆ ಆಯುಧದಿಂದ ಇರಿದುಕೊಳ್ಳುತ್ತಿರುವುದನ್ನು X Hindipost ಖಾತೆಯಲ್ಲಿ ಅಪಲೋಡ್ ಮಾಡಲಾದ ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಅವಳ ಸಹಪಾಠಿಯೊಬ್ಬರು ಅವಳನ್ನು ತಡೆಯಲು ಪ್ರಯತ್ನಿಸಿದರು ಆಗಲಿಲ್ಲ. ಬಾಲಕಿಯನ್ನು ತಕ್ಷಣ ಸ್ಥಳೀಯ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ರೇವಾ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.
ಘಟನೆಗೆ ಕಾರಣ ಸಿರಾಜ್ ಅಹ್ಮದ್ ನಿಂದ 9ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದೇ ಎನ್ನಲಾಗುತ್ತಿದೆ. ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಹಿಂಬಾಲಿಸುತ್ತಿದ್ದ ಆರೋಪಿ ಸಿರಾಜ್ ಅಹ್ಮದ್ ಆಗಾಗ್ಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ನಿರಂತರ ಕಿರುಕುಳದಿಂದ ಬೇಸತ್ತು ಬಾಲಕಿ ಇರಿದುಕೊಂಡಿದ್ದಾಳೆ ಎನ್ನಲಾಗಿದೆ.