
ರಾಯಚೂರು : ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿಗೆ ಏಳು ಜನ ಹೆಂಡತಿದಿದ್ದಾರೆ. ಅವರ ಮನೆ ಸರಿಪಡಿಸಿಕೊಳ್ಳಲು ಆಗುತ್ತಿಲ್ಲ, ಆದ್ರೇ ಶಿವನಗೌಡನನ್ನು ಸೋಲಿಸುವ ಕನಸು ಕಾಣುತ್ತಿದ್ದಾರೆ. ಅವರಿಗೆ ಧಮ್ಮಿದ್ರೆ ದೇವದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಿ ಎಂದು ಹಾಲಿ ಶಾಸಕ ಕೆ.ಶಿವನಗೌಡ ನಾಯಕ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ರಾತ್ರಿ ದೇವದುರ್ಗ ಪಟ್ಟಣದಲ್ಲಿ ನಡೆದ ವಿಜಯಸಂಕಲ್ಪಯಾತ್ರೆ ಬಹಿರಂಗಸಭೆ ಉದ್ದೇಶಿಸಿ ಮಾತನಾಡಿ, ನಾನೆಂದು ಕ್ಷೇತ್ರ ಜನರಿಗೆ ಅನ್ಯಾಯ ಮಾಡುವುದಿಲ್ಲ. ಶಿಖಂಡಿ ಕೆಲಸ ಮಾಡುವುದಿಲ್ಲ. ಮನೆ ಮಗ ಖುಷಿ ಪಡೆಯುವ ಕೆಲಸ ಮಾಡುವದಿಲ್ಲ ಎಂದು ಜನರು ಹೇಳಿ. ಆದರೆ ಅನೇಕರು ಪ್ರಯತ್ನ ಮಾಡುತ್ತಿದ್ದಾರೆ. ಎದೆ ಉಸಿರು ನಿಲ್ಲುತ್ತಿಲ್ಲ. ಆದರೆ ಎಚ್.ಡಿ.ಕುಮಾರಸ್ವಾಮಿಯವರಿಗೆ ಬುದ್ದಿಯಿಲ್ಲ. ಅವರಿಗೆ ಗಂಡಸ್ತನ ಇದ್ದರೆ ಸಾಬೀತು ಪಡೆಸಿ ಒಂದುವರೆ ಲಕ್ಷ ಮತಗಳಿಂದ ಗೆಲ್ಲುತ್ತೇನೆ. ದೇವೆಗೌಡರೂ, ಕುಮಾರಸ್ವಾಮಿ ಪುತ್ರ ಸಹ ಸೋತಿದ್ದಾರೆ. ಅವರ ಮನೆಯಲ್ಲಿಯೇ ಟಿಕೇಟ್‌ಗಾಗಿ ಕಚ್ಚಾಟ ನಡೆದಿದೆ.
ಅದನ್ನು ಸರಿಪಡಿಸಿಕೊಳ್ಳದವರು ನನ್ನನ್ನು ಮನೆಗೆ ಕಳುಹಿಸುವ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ, ರಾಹುಲಗಾಂಧಿಗೆ ಅಂಜುವ ಪ್ರಶ್ನೆಯೇ ಇಲ್ಲ. ಮುಂಡರಗಿ ಶಿವರಾಯನ ಆರ್ಶಿವಾದದಿಂದ ಜನತೆ ಬೆಂಬಲದಿಂದ ಜಿಲ್ಲೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವೆ ಎಂದು ಹೇಳಿದರು. ದುರುದ್ದೇಶ ಪೂರಕವಾಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾವದಕ್ಕೂ ಕಿವಿಗೊಡಬೇಡಿ.ನಿಮ್ಮ ಮನೆಗೆ ಮಗನಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವೆ ಎಂದರು.
![]() |
![]() |
![]() |
![]() |
![]() |
[ays_poll id=3]