ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಗುಲ್ಬರ್ಗ ವಿವಿ ಕುಲಸಚಿವರೇ ನೆರವು ಆರೋಪ : FIR ದಾಖಲು..?

K 2 Kannada News
ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಗುಲ್ಬರ್ಗ ವಿವಿ ಕುಲಸಚಿವರೇ ನೆರವು ಆರೋಪ : FIR ದಾಖಲು..?
WhatsApp Group Join Now
Telegram Group Join Now

K2kannadanews.in

Bed exam scam ಕಲಬುರಗಿ : ನಕಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಆರೋಪ ವಿಚಾರಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಸೇರಿ ಐವರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಜುಲೈ 1ರಿಂದ 7ರವರೆಗೆ ನಡೆದ ಬಿ.ಇಡಿ ಪರೀಕ್ಷೆಯ ಅಲ್‌ ಬದರ್ ಕಾಲೇಜಿನಲ್ಲಿ ಅಕ್ರಮವಾಗಿ ಹೊರ ರಾಜ್ಯದ 100 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು ಎನ್ನಲಾಗುತ್ತಿದೆ. ಆದ್ರೆ ಬಿಇಡಿ ಪರೀಕ್ಷೆ ಮುಗಿಯುವ ಅರ್ಧ ಗಂಟೆ ಮೊದಲೇ ವಿದ್ಯಾರ್ಥಿಗಳು ಹೊರ ಬರುತ್ತಿದ್ದರು. ಅವರ ಕೈಯಲ್ಲಿನ ಪ್ರವೇಶ ಪತ್ರಗಳು ಪರಿಶೀಲಿಸಿದಾಗ ಕೈ ಬರಹದಲ್ಲಿ ಇರುವುದು ಕಂಡುಬಂತು. ಯುಜಿಸಿ ಪ್ರಕಾರ ಯುಯುಸಿಎಂಎಸ್‌ನಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ಪ್ರವೇಶ ಪತ್ರ ನೀಡಬೇಕು ಎಂಬ ನಿಯಮವಿದೆ. ಆದರೆ, ಕೈ ಬರಹದ ಪ್ರವೇಶ ಪತ್ರ ನೋಡಿದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದೆ ಎಂದು ಆರೊಪಿಸಲಾಗಿತ್ತಿದೆ.

ನಾಗರಾಜ ಹಣಮಂತರಾಯ ನೀಡಿದ ದೂರಿನ ಅನ್ವಯ ಬಿಎನ್‌ಎಸ್‌ ಸೆಕ್ಷನ್ 319 (2), 318 (4), 336 (2) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಕಟ್ಟಿ, ಅಲ್‌ಬದರ್ ಕಾಲೇಜಿನ ಪ್ರಾಂಶುಪಾಲ ಮಲ್ಲಮ್ಮ ಮಂಠಾಳೆ, ಬಿ.ಇಡಿ ವಿಷಯ ನಿರ್ವಹಕ ಸ್ವರೂಪ ಭಟ್ಟರ್ಕಿ, ಲಿಖಿತ ಪರೀಕ್ಷೆ ಹಿರಿಯ ಮೇಲ್ವಿಚಾರಕ ಮೌನೇಶ ಅಕ್ಕಿ ಮತ್ತು ಇಂದಿರಾ ಗಾಂಧಿ ಬಿ.ಇಡಿ ಕಾಲೇಜು ಅಧ್ಯಕ್ಷ ಮೌಲಾ ಪಟೇಲ್‌ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article