K2kannadanews.in
Crime News ಲಿಂಗಸೂಗೂರು : ಗ್ರ್ಯಾನೈಟ್ ಗಣಿಯಲ್ಲಿ ಸಿಡಿಮದ್ದು ಸ್ಫೋಟಗೊಂಡು ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮತ್ತೋಬ್ಬನ ಸ್ಥಿತಿ ಗಂಭೀರವಾದ ಘಟನೆ ಮಾಕಾಪುರ ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮಾಕಾಪುರದಲ್ಲಿ ಘಟನೆ ನಡೆದಿದ್ದು. ವೆಂಕಟೇಶ್ (38) ಎಂಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೇ ವೇಳೆ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಗಣಿಯಲ್ಲಿ ಬಾಂಬ್ ಬ್ಲಾಸ್ಟ್ ಗೆ ಅನುಮತಿ ಇಲ್ಲದಿದ್ದರೂ ಬ್ಲಾಸ್ಟ್ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಮೃತ ಕಾರ್ಮಿಕ ಬಾಗಲಕೋಟೆ ಜಿಲ್ಲೆಯ ಮೆಣಸಿಗೇರಿ ಮೂಲದವರು ಎನ್ನಲಾಗಿದೆ. ಗಾಯಾಳು ಕಾರ್ಮಿಕನನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಗ್ರ್ಯಾನೈಟ್ ಗಣಿ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.