K2kannadanews.in
Witchcraft ಉತ್ತರ ಪ್ರದೇಶ : ಇಲ್ಲೊಂದು ಶಾಲೆ ಮಕ್ಕಳಲ್ಲಿ ವೈಚಾರಿಕತೆ ಬಿತ್ತುವ ಬದಲಿ, ಮೂಢನಂಬಿಕೆಯನ್ನು ಆಚರಿಸುವ ಮೂಲಕ ವಿದ್ಯಾರ್ಥಿಯ ಪ್ರಾಣ ತೆಗೆದ ಆಘಾತಕಾರಿ ಘಟನೆ ಹತ್ರಾಸ್ ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಇಂತಹ ಒಂದು ಅಮಾನವೀಯ ಘಟನೆ ನಡೆದಿದೆ. ಶಾಲೆಗೆ ದೊಡ್ಡ ಹೆಸರು ಬರಬೇಕೆಂದು ಮಾಟ-ಮಂತ್ರ ಮಾಡಿಸಿದ್ದ ಶಾಲೆಯ ನಿರ್ದೇಶಕ ಹಾಗೂ ಶಿಕ್ಷಕರು 2ನೇ ಕ್ಲಾಸ್ ಬಾಲಕನ್ನ ನರಬಲಿ ಕೊಟ್ಟಿದ್ದಾರೆ. ಶಾಲೆಗೆ ಕೀರ್ತಿ ಮತ್ತು ಯಶಸ್ಸನ್ನು ತರಲು ಉದ್ದೇಶಿಸಲಾದ ಆಚರಣೆಯಲ್ಲಿ ಮಗುವನ್ನು ಬಲಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸುಮಾರು 600 ವಿದ್ಯಾರ್ಥಿಗಳನ್ನು ಈ ಶಾಲೆಯ ಹೊಂದಿದ್ದು, ಪುಟ್ಟ ಮಕ್ಕಳನ್ನೂ ಕೂಡ ತನ್ನ ಹಾಸ್ಟೆಲ್‌ನಲ್ಲಿ ಇರಿಸಿಕೊಳ್ಳುತ್ತದೆ. ಬಲಿಯಾಗಿರುವ ಬಾಲಕ ಕೂಡ ಇದೇ ಹಾಸ್ಟೆಲ್‌ನಲ್ಲಿದ್ದ ಎನ್ನಲಾಗಿದೆ. ಇನ್ನು ಬಾಲಕನ ತಂದೆ ದೆಹಲಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾನೆ ಎನ್ನಲಾಗಿದೆ. 2ನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕ ಸೋಮವಾರ ತನ್ನ ಹಾಸ್ಟೆಲ್ ಬೆಡ್‌ನಲ್ಲಿ ಪ್ರಜ್ಞೆ ಇಲ್ಲದೆ ಬಿದ್ದುಕೊಂಡಿದ್ದ ಎನ್ನಲಾಗಿದೆ. ಘಟನೆಯನ್ನು ವರದಿ ಮಾಡುವ ಬದಲು, ಶಾಲೆಯ ಸಿಬ್ಬಂದಿ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು, ಪೊಲೀಸರು ಮಧ್ಯಪ್ರವೇಶಿಸುವ ಮೊದಲು ಬಾಲಕನ ಶವವನ್ನು ಅವನ ಕಾರಿನಲ್ಲಿಟ್ಟುಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ.