This is the title of the web page
This is the title of the web page
National News

ಅನುಭವಸ್ಥ ಅತಿಥಿ ಉಪನ್ಯಾಸಕರಿಗೆ ಶುಭ ಸುದ್ದಿ


K2 ನ್ಯೂಸ್ ಡೆಸ್ಕ್ : ಸರ್ಕಾರ ಮತ್ತು ಅತಿಥಿ ಉಪನ್ಯಾಸಕರ ಹಗ್ಗ ಜಗ್ಗಾಟ ಮುಂದುವರೆದಿದ್ದು, ಇದೀಗ ನ್ಯಾಯಾಲಯ ಮೊರೆಹೋಗಿದ್ದ ಅತಿಥಿ ಉಪನ್ಯಾಸಕರಿಗೆ ಶುಭ ಸುದ್ದಿಯೋಂದು ಸಿಕ್ಕಿದೆ.

ಅತಿಥಿ ಉಪನ್ಯಾಸಕರನ್ನು UGC ನಿಯಮಾವಳಿಯಂತೆ ನೇಮಿಸಿಕೊಳ್ಳಿ ಎಂದು ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಯುಜಿಸಿ ಅರ್ಹತೆ ಪಡೆಯದ ಅನುಭವವುಳ್ಳ ಅತಿಥಿ ಉಪನ್ಯಾಸಕರು, ಸರ್ಕಾರ 2022ರ ಜ.17ರಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಸುತ್ತೋಲೆಯಲ್ಲಿ ಪ್ರತೀ ವರ್ಷದ ಅನುಭವಕ್ಕೆ 3 ಅಂಕಗಳಂತೆ ಗರಿಷ್ಠ 16 ಕೃಪಾಂಕ ನೀಡಲು ಸರ್ಕಾರ ನಿರ್ಧರಿಸಿದೆ. ಇದೂ ಕೂಡ ಸೂಕ್ತವಾಗಿದೆ ಎಂದು ಸುತ್ತೋಲೆ ಎತ್ತಿಹಿಡಿದಿದೆ.


[ays_poll id=3]