ರಾಜಾ”ಡಳಿತಕ್ಕೆ ಗುಡ್ ಬೈ: ಮಾಜಿ ಜಿಲ್ಲಾಧಿಕಾರಿಗೆ ಜೈಎಂದ ರಾಯಚೂರು ಮತದಾರ

K 2 Kannada News
ರಾಜಾ”ಡಳಿತಕ್ಕೆ ಗುಡ್ ಬೈ: ಮಾಜಿ ಜಿಲ್ಲಾಧಿಕಾರಿಗೆ ಜೈಎಂದ ರಾಯಚೂರು ಮತದಾರ
Oplus_0
WhatsApp Group Join Now
Telegram Group Join Now

K2kannadanews.in

Political News ರಾಯಚೂರು : ತೀವ್ರ ಕುತೂಹಲ ಕೆರಳಿದ್ದ (He was very curious) ರಾಯಚೂರು ಲೋಕಸಭಾ ಕ್ಷೇತ್ರದ ಫಲಿತಾಂಶ (Result) ಪ್ರಕಟವಾಗಿದ್ದು ಕೊನೆಗೂ ಕಾಂಗ್ರೆಸ್ (Congress) ತನ್ನ ಭದ್ರ ಕೋಟೆಯನ್ನು ಮರಳಿ ವಶಕ್ಕೆ ಪಡೆದಿದೆ. ರಾಜಾ”ಡಳಿತ ತಿರಸ್ಕರಿಸಿ ನಿವೃತ್ತ ಡಿಸಿಗೆ ವಿಜಯದ ಮಾಲೆ ಹಾಕಿದ್ದಾರೆ.

ಹೌದು ಕಳೆದ ಚುನಾವಣೆಯಲ್ಲಿ (Election) ಬಿಜೆಪಿಯಿಂದ (BJP) ಜಯಗಳಿಸಿದ್ದ ರಾಜಾಅಮರೇಶ್ವರ ನಾಯಕರು ಮತ್ತೊಮ್ಮೆ ಅದೃಷ್ಣ ಪರೀಕ್ಷೆಗಳಿದ್ದರು ಆದರೆ ಕಾಂಗ್ರೆಸ್ ಅಭ್ಯರ್ಥಿಯಾದ ಮಾಜಿ ಜಿಲ್ಲಾಧಿಕಾರಿ (IAS), ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಜಿ.ಕುಮಾರ್ ನಾಯಕರು ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ಅಡ್ಡಿಯಾಗುವ ಮೂಲಕ 79,781 ಮತಗಳಿಂದ (Vote’s) ಜಯಗಳಿಸಿ, ಜಿಲ್ಲೆಯ ಮತದಾರ ಪ್ರಭುಗಳು ರಾಜಾಡಳಿತಕ್ಕೆ ಗುಡ್ ಬೈ ಹೇಳಿ, ಮಾಜಿ ಜಿಲ್ಲಾಧಿಕಾರಿಗೆ ಒಂದು ಅವಕಾಶ ನೀಡೋಣ ಎಂದು ಜಿ.ಕುಮಾರ್ ನಾಯಕರಿಗೆ ಜೈಕಾರ ಹಾಕಿದ್ದಾರೆ.

ರಾಯಚೂರು (Raichur) ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8  ವಿಧಾನಸಭಾ ಕ್ಷೇತ್ರಗಳಲ್ಲಿ ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಅರಂಭದಿಂದಲೂ ಕೈ ಅಭ್ಯರ್ಥಿ ಮುನ್ನಡೆಯನ್ನು ಕಾಯ್ದುಕೊಂಡಿದ್ದರು, ಹಾಲಿ ಸಂಸದರಾದ ರಾಜಾ ಅಮರೇಶ್ವರ ನಾಯಕರಿಗೆ ಟಿಕೆಟ್ ನೀಡಬಾರದೆಂದು ಬಿಜೆಪಿ ಕಾರ್ಯಕರ್ತರೇ ಪ್ರತಿಭಟಿಸಿದ್ದರು ಆದರೂ ಕೂಡ ಹೈಕಮಾಂಡ್ (high command) ಮುಖಂಡರ ಹಾಗೂ ಕಾರ್ಯಕರ್ತರ ಮಾತಿಗೆ ಬೆಲೆ ನೀಡದ ಟಿಕೆಟ್ (ticket) ನೀಡಿರುವುದೇ ಬಿಜೆಪಿ ಸೋಲಿಗೆ ಕಾರಣವಾಗಿದ್ದು , ಅಲ್ಲದೇ ಪಕ್ಷದ ಹಾಲಿ ಶಾಸಕರುಗಳು (MLA) ಹಾಗೂ ಮಾಜಿ ಶಾಸಕರುಗಳು ಒಲ್ಲದ ಮನಸ್ಸಿ‌ನಿಂದ ಪ್ರಚಾರ ಕೈಗೊಂಡಿದ್ದರು.

ಆದರೆ ಕಾಂಗ್ರೆಸ್ ಪಕ್ಷವು ಚುನಾವಣೆಯ ಮುನ್ನ ಒಡೆದ ಮನೆಯಾಗಿತ್ತು. ಆದರೆ ಹೈಕಮಾಂಡ್ ಇದನ್ನು ಮನಗಂಡು ಜಿಲ್ಲೆಯ (District) ಹೊರಗಿನ ಅಭ್ಯರ್ಥಿಯನ್ನು (Candidate) ಕಣಕ್ಕಿಳಿಸುವ ಮೂಲಕ ಬಂಡಾಯವನ್ನು ಶಮಗೊಳಿಸಿತ್ತು. ಅಲ್ಲದೇ ಕೊನೆ ಹಂತದಲ್ಲಿ 4 ದಶಕದ ನಂತರ ಜಿಲ್ಲಾಧ್ಯಕ್ಷ (President) ಸ್ಥಾನವನ್ನು ಲಿಂಗಾಯತ ಸಮುದಾಯದ ನಾಯಕರಾದ ಮಾಜಿ ವಿಧಾನಪರಿಷತ್ ಸದಸ್ಯರಾದ ಬಸವರಾಜ್ ಪಾಟೀಲ್ ಇಟಗಿಯವರಿಗೆ ನೀಡುವ ಮೂಲಕ ಜಾತಿ ಸಮೀಕರಣದೊಂದಿಗೆ ಕಣಕ್ಕಿಳಿದಿದ್ದು ಇದರಿಂದಾಗಿ ಸಹಜವಾಗಿ ದೇವದುರ್ಗ ತಾಲೂಕಿನಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಪಡೆಯಲು ಅನುಕೂಲವಾಯಿತು. ಒಟ್ಟಿನಲ್ಲಿ ಜನತೆಗೆ ನಿರಂತರ ಸಂಪರ್ಕದಲ್ಲಿರುವ ವ್ಯಕ್ತಿಗೆ ಮಾತ್ರ ನಾವು ಮತಚಲಾಯಿಸುತ್ತೇವೆ ಎಂಬ ಸಂದೇಶವನ್ನು ಜಿಲ್ಲೆಯ ಜನ ನೀಡಿದ್ದಾರೆ.

WhatsApp Group Join Now
Telegram Group Join Now
Share This Article