ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಸಿಂಧನೂರಿನಲ್ಲಿ ಜಿಜೆಪಿ ಪ್ರತಿಭಟನೆ..

K 2 Kannada News
ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಸಿಂಧನೂರಿನಲ್ಲಿ ಜಿಜೆಪಿ ಪ್ರತಿಭಟನೆ..
WhatsApp Group Join Now
Telegram Group Join Now

K2kannadanews.in

BJP protest ಸಿಂಧನೂರು : ಪೆಟ್ರೋಲ್ (Petrol) ಮತ್ತು ಡಿಸೇಲ್(Diesel) ದರ ಏರಿಕೆ (Price hike) ಖಂಡಿಸಿ ಸಿಂಧನೂರಿನಲ್ಲಿ ಜಿಜೆಪಿ (Bjp) ಘಟಕದಿಂದ ಸಿಎಂ ಸಿದ್ದರಾಮಯ್ಯ (CM Siddaramayya) ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅಸಮಧಾನ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ಮಾಡಲಾಯಿತು. ನಗರದ ಪ್ರವಾಸಿ ಮಂದಿರದಿಂದ (IB) ಪ್ರತಿಭಟನಾ ಮೆರವಣಿಗೆ (Rally) ಮಾಡಿದರು. ಪ್ರತಿಭಟನೆಯಲ್ಲಿ ಆಟೋ ರಿಕ್ಷಾಕ್ಕೆ (Autoriksha) ಹಗ್ಗ ಕಟ್ಟಿ ಗಾಂಧಿ ವೃತ್ತದವರೆಗೆ ಎಳೆದುಕೊಂಡು, ಸರಕಾರದ (Government) ವಿರುದ್ಧ ಘೋಷಣೆ ಕೂಗಿ ಆಕ್ರೋಷ ಹೊರಹಾಕಿದರು. ನಂತರ ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿ ಆಗಿದಕ್ಕೆ ದರ ಏರಿಕೆ ಮಾಡಿದೆ ಎಂದು ಅಸಮಧಾನ ವ್ಯಕ್ತಪಡಿಸಿ ಕೂಡಲೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article