ಗಿಲ್ಲೆಸುಗೂರು : ಹೋಳಿ ಆಚರಣೆ, ನೀರಿನಲ್ಲಿ ಕೊಚ್ಚಿ ಹೋದ ಸ್ನಾನಕ್ಕೆ ಹೋಗಿದ್ದ ವ್ಯಕ್ತಿ..

K 2 Kannada News
ಗಿಲ್ಲೆಸುಗೂರು : ಹೋಳಿ ಆಚರಣೆ, ನೀರಿನಲ್ಲಿ ಕೊಚ್ಚಿ ಹೋದ ಸ್ನಾನಕ್ಕೆ ಹೋಗಿದ್ದ ವ್ಯಕ್ತಿ..
WhatsApp Group Join Now
Telegram Group Join Now

K2Kannadanews.in

Crime News ರಾಯಚೂರು : ಹೋಳಿ (Holi) ಆಚರಣೆಯ ನಂತರ ಸ್ನೇಹಿತರೊಂದಿಗೆ (Friends) ಕಾಲುವೆಗೆ ಸ್ನಾನಕ್ಕೆ (Bath) ತೆರಳಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಗಿಲ್ಲೆಸುಗೂರು ಕ್ಯಾಂಪ್ ಬಳಿಯ ಕಾಲುವೆಯಲ್ಲಿ ನಡೆದಿದೆ.

ರಾಯಚೂರು (Raichur) ತಾಲೂಕಿನ ಗಿಲ್ಲೆಸೂಗುರು ಚೆಕ್ ಪೋಸ್ಟ್ ಬಳಿ ಇರುವ ಆರ್ ಡಿ ಎಸ್ ಕಾಲುವೆಯಲ್ಲಿ (RDS Channal) ವ್ಯಕ್ತಿ ಕೊಚ್ಚಿ ಹೋದ ಘಟನೆ ನಡೆದಿದೆ. ಯರಗೇರಾ (Yaragera) ಗ್ರಾಮದ ಕಿರಾಣಿ ಅಂಗಡಿ ವ್ಯಾಪಾರಿ ಮಹಾದೇವ್(30) ನೀರಿನಲ್ಲಿ ಕೊಚ್ಚಿ ಹೋದ ದುರ್ದೈವೆ ಎಂದು ಗುರುತಿಸಲಾಗಿದೆ. ಸಂಭ್ರಮದಿಂದ ಹೋಳಿ ಆಚರಣೆ ಮಾಡಿದ ನಂತರ, ಮೂವರು ಸ್ನೇಹಿತರು ಕಾಲುವೆಗೆ ಈಜಾಡಲು (Swimming) ತೆರಳಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಇಡಪನೂರು ಪೊಲೀಸ್ (Edapanuru police) ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಮಾಹಿತಿ ಪಡೆದು ಕೊಚ್ಚಿ ಹೋದ ವ್ಯಕ್ತಿಗಾಗಿ ಶೋಧಕಾರ್ಯ ಆರಂಭಿಸಿದ್ದರು.

ಒಂದೆಡೆ ನಾಪತ್ತೆಯಾಗಿದ್ದ ಸ್ಥಳದಿಂದ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಸುಮಾರು 12 ಗಂಟೆ ವೇಳೆಗೆ ಈ ಒಂದು ದುರ್ಘಟನೆ ಜರುಗಿತ್ತು. ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ, ಮೇಲೆ ಬರಲು ಆಗದೆ ಮೃತಪಟ್ಟ ಇರಬಹುದು ಎಂದು ಶಂಕಿಸಲಾಗಿತ್ತು. ಅಷ್ಟರಲ್ಲಾಗಲೇ ಪಕ್ಕದ ತೆಲಂಗಾಣ (Telangan) ರಾಜ್ಯದ ದೊಡ್ಡಿ ಸಿಂಧನೂರು ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹದೇವ್ ಮೃತ ದೇಹ ಸಿಕ್ಕಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಾಲುವೆಯಲ್ಲಿ ದೊರೆತ ಶವವನ್ನು ಹೊರ ತೆಗೆದು, ಅಲ್ಲಿನ ಸ್ಥಳೀಯ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ರವಾನಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article