K2Kannadanews.in
Crime News ರಾಯಚೂರು : ಗ್ಯಾಸ್ ಸಿಲೆಂಡರ್ (gas cylinder) ಸ್ಪೋಟಗೊಂಡ (Blast) ಕಾರಣ ಟಿನ್ ಶೆಡ್ (Ten Sheed) ಗುಡಿಸಲು ಸುಟ್ಟು ಕರಕಲಾಗಿದ್ದು, ಜೊತೆಗೆ ಪಕ್ಕದಲ್ಲೆ ಕಟ್ಟಿಹಾಕಿದ್ದ ಐದು ಕುರಿಗಳು (Sheep) ಸಜೀವದಹನವಾದ ಘಟನೆ ಏಗನೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ರಾಯಚೂರು (Raichur) ತಾಲ್ಲೂಕಿನ ಏಗನೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆಯು, ತಿಪ್ಪಮ್ಮ ಹಾಗು ಪತಿ ನರಸಿಂಹಲು ಯಾದವ ಅವರ ಮನೆಯಲ್ಲಿ ಜರುಗಿದೆ. ಘಟನೆಯಲ್ಲಿ 25,000 ಬೆಲೆಬಾಳುವ ನಾಲ್ಕು ಕುರಿಗಳು ಸಜೀವ ದಹನವಾಗಿವೆ. 45,000 ನಗದು, 5 ತೊಲೆ ಬಂಗಾರ ಸೇರಿ, ಬೆಳ್ಳಿ ಚೈನ್, ದಿನಸಿ ಸಾಮಾನುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಕಿ ನಂದಿಸಲು ಗ್ರಾಮಸ್ಥರು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್ ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆಯು ರಾಯಚೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.