K2kannadanews.in
Local News ರಾಯಚೂರು : ನೂತನ ದೇವಸ್ಥಾನದ ಪ್ರತಿಷ್ಠಾಪನೆ ವೇಳೆ ಗರುಡ ಸ್ಥಂಭ ಮುರಿದು ಬಿದ್ದು, ಶಾಸಕ, ಸ್ವಾಮಿಜಿ, ಗ್ರಾಮದ ಮುಖಂಡರು ಸ್ಪಲ್ಪದರಲ್ಲೇ ಪಾರಾದ ಘಟನೆ ಬಿದನಗೆರೆ ಗ್ರಾಮದಲ್ಲಿ ನಡೆದಿದೆ.
ರಾಯಚೂರು ತಾಲೂಕಿನ ಬಿಜನಗೇರಾ ಗ್ರಾಮದಲ್ಲಿ ಘಟನೆ ಜರುಗಿದ್ದು, ಅದೃಷ್ಟವಶಾತ್ ಸ್ವಲ್ಪದರಲ್ಲೇ ಪವಾಡ ರೀತಿಯಲ್ಲಿ ಅನಾಹುತ ತಪ್ಪಿದೆ. ಗ್ರಾಮದ ನೂತನ ಶ್ರೀ ಆಂಜನೇಯ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 27 ಅಡಿ ಎತ್ತರದ ಗರುಡ ಸ್ಥಂಭ ಕ್ರೇನ್ ಮೂಲಕ ನಿಲ್ಲಿಸುವ ವೇಳೆ ಸರಿಯಾದ ರೀತಿಯಲ್ಲಿ ಹಗ್ಗ ಕಟ್ಟದ ಹಿನ್ನಲೆ ತುಂಡಾಗಿ ಬಿದ್ದ ಗರುಡ ಸ್ಥಂಭ ಬಿದ್ದಿದೆ.
ಈ ವೇಳೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಕಿಲ್ಲೆ ಬೃಹನ್ ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಜಿ , ಬಿಜೆಪಿ ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಸೇರಿ ನೂರಾರು ಜನ ಸೇರಿದ್ದ ವೇಳೆ ನಡೆದ ಅವಘಡದಲ್ಲ ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಜರುಗಿಲ್ಲ.