K2kannadanews.in
Viral Video News ಕೇರಳ : ಪ್ರಾಣಿ ಸಂಕುಲದಲ್ಲಿ ತಾಳ್ಮೆಗೆ ಹೆಸರುವಾಸಿಯಾಗಿರುವ ಪ್ರಾಣಿ ಗಜರಾಜ (Elephant). ಆದರೆ ಸಾಕಾನೆಯೊಂದು ತಾಳ್ಮೆ (Patience) ಕಳೆದುಕೊಂಡು ಮಾವುತನನ್ನು ತುಳಿದು (trampled) ಸಾಯಿಸಿರುವ ಘಟಯೊಂದು ನಡೆದಿದೆ. ಆ ಭಯಾನಕ ವಿಡಿಯೋ ಸಿಸಿಟಿವಿ (Video CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ(Social media) ವೈರಲ್ (Viral) ಆಗಿದೆ.
ಹೌದು ಕೇರಳದಲ್ಲಿ (Kerala) ಆನೆಗಳನ್ನು ಸಾಕುವುದು ಇಂದಿಗೂ ಪ್ರತೀತಿ ಇದೆ. ಆಗಾಗ ಅಹಿತಕರ ಘಟನೆಗಳು ಜರುಗಿರುವುದು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತದ್ದೇ ಒಂದು ಘಟನೆ ಜರುಗಿದ್ದು ವಿಡಿಯೋ ಭಾರಿ ವೈರಲ್ ಆಗಿದೆ. ಕೇರಳದ ಕಲ್ಲರ್ನಲ್ಲಿ (kallar) ಆನೆ ಮಾವುತನನ್ನು ತುಳಿದು ಸಾಯಿಸಿದ್ದು, ಮೃತರನ್ನು ಬಾಲಕೃಷ್ಣನ್ (62) ಎಂದು ಗುರುತಿಸಲಾಗಿದೆ.
ದೃಶ್ಯದಲ್ಲಿ (Seen) ಕಂಡಂತೆ ಮಾವುತನು ಆನೆಗ ಅಂಕುಶದಿಂದ ಸಲಗದ ಕಾಲಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ (angry) ಆನೆ ಮಾವುತನನ್ನು ನೆಲಕ್ಕೆ ಹಾಕಿ ತನ್ನ ಕಾಲಿನಿಂದ ತುಳಿದು ಸೋಂಡಿಲಿನಿಂದ ಎತ್ತಿ ಕೆಳಕ್ಕೆಸೆಯುತ್ತದೆ. ತಕ್ಷಣ ಮಾವುತನನ್ನು ಕಾಪಾಡಲು ಇನ್ನೊಬ್ಬ ವ್ಯಕ್ತಿ ಆಗಮಿಸಿದ್ದು ಅಷ್ಟರಲ್ಲಾಗಲೇ ಮಾವುತ ಸಾವನ್ನಪ್ಪಿದ್ದ ಎನ್ನಲಾಗಿದೆ. ಮೃತ ಮಾವುತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.