K2kannadanews.in
Krishna flood ದೇವದುರ್ಗ : ಮಹಾರಾಷ್ಟ್ರ (Maharashtra) ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾದ (Heavy rain) ಹಿನ್ನೆಲೆ ಕೃಷ್ಣಾ ನದಿಗೆ (Krishna river) ಭಾರಿ ನೀರು ಬಿಡುಗಡೆ ಮಾಡಿದ ಹಿನ್ನಲೆ ಹೂವಿನಹೆಡಗಿ ಗ್ರಾಮದ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ (Temple) ಭಾಗಶಃ ಮುಳುಗಿದೆ.
ನಾರಾಯಣಪುರ ಜಲಾಶಯದಿಂದ (narayapur dam) ನೀರಿನ ಒರ ಹರಿವು ಹೆಚ್ಚಿದ ಕಾರಣ, ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಹೂವಿನಹೆಡಗಿ ಗ್ರಾಮದಲ್ಲಿರೋ ಇತಿಹಾಸ (Historical) ಪ್ರಸಿದ್ಧ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿದೆ. ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ. ಪ್ರಸ್ತುತ ದೇವಸ್ಥಾನದ ಛಾವಣಿ ಮೇಲ್ಭಾಗದಲ್ಲಿ ನೀರು ಹರಿಯುತ್ತಿದೆ.
ಸಧ್ಯ ಕೃಷ್ಣಾ ನದಿಗೆ 68,480 ಕ್ಯೂಸೆಕ್ ನೀರು ಬಿಟ್ಟ ಹಿನ್ನಲೆ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಹೂವಿನಹೆಡಗಿ ಸೇತುವೆ ಮುಳುಗಡೆಗೂ ಕೆಲವೇ ಕೆಲವು ಅಡಿ ಬಾಕಿ ಇದ್ದು, ಸೇತುವೆ ಮುಳಿಗಿದ್ರೆ ಯಾದಗಿರಿ ಜಿಲ್ಲೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.