ರೈಲು ತಡವಾಗಿ ಬಂದರೆ ಸಂಪೂರ್ಣ ಹಣ ವಾಪಸ್’
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್: ಕೇಂದ್ರ ರೈಲ್ವೆ ಇಲಾಖೆ ರೈಲು ಪ್ರಯಾಣಿಕರಿಗೆ ಸಂತಸದ ಸಮಾಚಾರ ನೀಡಿದೆ. ಇನ್ಮುಂದೆ ನೀವು ಪ್ರಯಾಣಿಸುವ ರೈಲು ತಡವಾಗಿ ಬಂದಿದೆ ಆದರೆ ನಿಮಗೆ ಹಣ ಸಂಪೂರ್ಣವಾಗಿ ಹಿಂದಿರುಗಿಸುವುದಾಗಿ ಹೇಳಿದೆ.
ಪ್ರಯಾಣಿಕರಿಗೆ ಸಂತಸದ ಸಮಾಚಾರ ನೀಡಿರುವ ರೈಲ್ವೆ ಇಲಾಖೆ, ಇನ್ನು ಮುಂದೆ ರೈಲು ತಡವಾದರೆ ಪ್ರಯಾಣಿಕರ ಟಿಕೆಟ್ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸಲಾಗುವುದು ಎಂದು ಹೇಳಿದೆ. ಚಳಿಗಾಲದಲ್ಲಿ ರೈಲು ಮೂರು ಗಂಟೆ ತಡವಾಗಿ ಬಂದರೆ ನಿಮ್ಮ ಟಿಕೆಟ್ ರದ್ದುಗೊಳಿಸಬಹುದು ಮತ್ತು ಸಂಪೂರ್ಣ ಹಣವನ್ನು ಮರಳಿ ಪಡೆಯಬಹುದು ಎಂದಿದೆ. ದೃಢೀಕರಿಸಿದ ಟಿಕೆಟ್ ಹೊರತುಪಡಿಸಿ, RAC ಟಿಕೆಟ್‌ನಲ್ಲಿ ಸಂಪೂರ್ಣ ಮರುಪಾವತಿ ನೀಡಲಾಗುತ್ತಿದ್ದು, ಉಚಿತ ಆಹಾರ ಮತ್ತು ಪಾನೀಯದ ಸೌಲಭ್ಯವನ್ನೂ ಪಡೆಯಬಹುದು ಎಂದು ಹೇಳಿದೆ.
![]() |
![]() |
![]() |
![]() |
![]() |