
ರಾಯಚೂರು : ಹೊಸ ಎಪಿಎಂಸಿ ಮಾರುಕಟ್ಟೆಯಲ್ಲಿ ಡಿಸೆಂಬರ್ 25 ರಿಂದ ಪ್ರತಿ ಭಾನುವಾರ ಮೆಣಸಿನಕಾಯಿ ಮಾರಲಿಕೆ ಸಗಟು ವ್ಯಾಪಾರವನ್ನು ಪ್ರಾರಂಭಿಸಲಾಗುತ್ತದೆ ನಗರ ಶಾಸಕ ಡಾ ಶಿವರಾಜ ಪಾಟೀಲ್ ಹೇಳಿದರು.
ರಾಯಚೂರು ಜಿಲ್ಲೆಯಲ್ಲಿ ಕೆಂಪು ಮೆಣಸಿನಕಾಯಿ ಬೆಳೆಯನ್ನು ರೈತರು ನಿರೀಕ್ಷೆಗೆ ಮೀರಿ ಬೆಳೆದಿದ್ದು, ತೋಟಗಾರಿಕೆ ಇಲಾಖೆ ಮಾಹಿತಿಯಂತೆ ಜಿಲ್ಲೆಯ ಒಟ್ಟು 2621 ಹೆಕ್ಟೇರ್‌ನಲ್ಲಿ ಗುರಿಯಿತ್ತು. ಆದರೆ ರೈತರು ನಿರೀಕ್ಷೆಗೆ ಮೀರಿ ಮುಂಗಾರಿನಲ್ಲಿ 3741 ಹೆಕ್ಟೇರ್ ಹಾಗೂ ಹಿಂಗಾರಿನಲ್ಲಿ 435 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ಕಳೆದ 8 ತಿಂಗಳಿಂದ ರೈತರು ಮೆಣಸಿನಕಾಯಿ ಬೆಳೆಗೆ ಎಕರೆಗೆ 80 ರಿಂದ 90 ಸಾವಿರ ರೂ.ಖರ್ಚು ಮಾಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ಅಕಾಲಿಕ ಮಳೆಗೆ ಮೆಣಸಿನಕಾಯಿ ಗಿಡದಲ್ಲಿ ನೀರು ನಿಂತಿದ್ದರಿಂದ ಅಲ್ಪಪ್ರಮಾಣದಲ್ಲಿ ಬೆಳೆ ಗುಣಮಟ್ಟದಲ್ಲಿ ವ್ಯತ್ಯಾಸವಾಗಿದೆ.ಆದರೂ ರೈತರು ಬೆಳೆ ಕಟಾವು ಮಾಡಿದ್ದು, ಗುಣಮಟ್ಟದ ಮೆಣಸಿನಕಾಯಿಗೂ ದರ ವಿಲ್ಲದಂತಾಗಿದೆ.
ಮಾರುಕಟ್ಟೆಯಲ್ಲಿ ಕೆಂಪು ಮೆಣಸಿನಕಾಯಿಗೆ ಬೆಲೆ ಇಲ್ಲದಂತಾಗಿದೆ. ಕ್ವಿಂಟಾಲ್‌ಗೆ ರೂ.47,500 ಇರಬೇಕಾಗಿದ್ದ ಬೆಲೆಯೂ ಸದ್ಯ ಕ್ವಿಂಟಾಲ್‌ಗೆ ರೂ.38 ಸಾವಿರ ಇದೆ ಎಂದರು. ಇಲ್ಲಿ ಬೆಳೆದ ಮೆಣಸಿನಕಾಯಿಯನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ,ಚಿತ್ರದುರ್ಗ, ಚಳ್ಳಕೇರಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿರುವುದರಿಂದ ಈಗ ಜಿಲ್ಲೆಯಲ್ಲಿಯೇ ಹೋಲ್ಸೇಲ್ ಮಾರಾಟವನ್ನು ಪ್ರಾರಂಭಿಸಲಾಗುತ್ತಿದೆ. ಮೆಣಸಿನಕಾಯಿ ಬೆಳೆದಂತ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
![]() |
![]() |
![]() |
![]() |
![]() |
[ays_poll id=3]