ಉಚಿತ ಹೆಲ್ಮೆಟ್ ಉಚಿತ ಪ್ರಚಾರ ಕೊಟ್ಟ ಹೆಲ್ಮೆಟ್ ಮಾತ್ರ ಬೆರಳೆಣಿಕೆ…

K 2 Kannada News
ಉಚಿತ ಹೆಲ್ಮೆಟ್ ಉಚಿತ ಪ್ರಚಾರ ಕೊಟ್ಟ ಹೆಲ್ಮೆಟ್ ಮಾತ್ರ ಬೆರಳೆಣಿಕೆ…
Oplus_131072
WhatsApp Group Join Now
Telegram Group Join Now

K2kannadanews.in

FREE HELMET ರಾಯಚೂರು : ಸಾರ್ವಜನಿಕರಿಗೆ ನೂರಾರು ಹೆಲ್ಮೆಟ್ (Helmet) ಉಚಿತವಾಗಿ (free) ಕೊಡುವುದಾಗಿ ಪ್ರಚಾರ ಪಡೆದು, ಪರಿಚಯಸ್ಥರಿಗೆ ಮಾತ್ರ ಹೆಲ್ಮೆಟ್ ನೀಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ನವಂಬರ್ 1ರಿಂದ (November) ರಾಯಚೂರು ಜಿಲ್ಲೆಯಾದ್ಯಂತ (Raichur) ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಜಾರಿಯಾಗುತ್ತಿದ್ದಂತೆ, ಕೆಲವೊಬ್ಬರು ಪ್ರಚಾರ (publicity) ಗಿಟ್ಟಿಸಿಕೊಳ್ಳಲು ಉಚಿತವಾಗಿ ಸಾರ್ವಜನಿಕರಿಗೆ ಹೆಲ್ಮೆಟ್ ನೀಡುವುದಾಗಿ ಪ್ರಚಾರವು ಮಾಡಿದ್ದರು. ಸಚಿವರು (Minister), ಶಾಸಕರ (MLA) ಹಾಗೂ ಎಸ್ಪಿ (SP) ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದ ವೇಳೆ, ಕೆಲವರಿಗೆ ಉಚಿತವಾಗಿ ಕೊಟ್ಟಿದ್ದು ಬಿಟ್ಟರೆ ಇನ್ನು ಯಾವುದೇ ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್ ನೀಡಲಿಲ್ಲ. ಸಾರ್ವಜನಿಕವಾಗಿ ವಿತರಿಸುವುದಾಗಿ ಹೇಳಿ ಆಯೋಜಕರು ಒಂದು ಪಟ್ಟಿ ಸಿದ್ಧಪಡಿಸಿಕೊಂಡು ಅವರಿಗೆ ಮಾತ್ರ ವಿತರಿಸಲು ಮುಂದಾಗಿದ್ದರು.

ಇದನ್ನು ಕಂಡು ಪಟ್ಟಿ ಮಾಡಿಕೊಂಡು ಉಚಿತವಾಗಿ ಹಂಚುವುದಾಗಿ ಯಾಕೆ ಪ್ರಚಾರ ಮಾಡಿದ್ದೀರಿ ಎಂದು ಸೇರಿದ ಸಾರ್ವಜನಿಕರು ಆಯೋಜಕರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದು, ಕೆಲ ಹೊತ್ತು ಗೊಂದಲಮಯ ವಾತಾವರಣ ಉಂಟಾಯಿತು. ಈ ವೇಳೆ ಪೊಲೀಸರು ಸಾರ್ವಜನಿಕರನ್ನು ಚದುರಿಸಿದ ಘಟನೆಯು ನಡೆಯಿತು. ಈ ಒಂದು ಘಟನೆ ಇದೀಗ ಆಯೊಜಕರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರವಿರೋಧದ ಚರ್ಚೆ ನಡೆಯುತ್ತಿದ್ದೆ. ಉಚಿತ ಹೆಲ್ಮೆಟ್ ಕೊಡುವುದಾಗಿ ಹೇಳಿ ಪಟ್ಟಿ ಮಾಡಿಕೊಂಡಿದ್ದು ಎಷ್ಟು ಸರಿ, ಯಾವ ರೀತಿಯ ಮಾನವೀಯತೆ ಇರಬೇಕಾಗಿತ್ತು ಸಾಮಾಜಿಕ ಕಾರ್ಯಕರ್ತ ಅಂಬಾಜಿ ರಾವ್ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article