ಉಚಿತ ಆರೋಗ್ಯ ತಪಾಸಣೆ ಅಭಿಯಾನ
![]() |
![]() |
![]() |
![]() |
![]() |
ರಾಯಚೂರು : ಚಂಡಮಾರುತ ಅಲೆಯ ಅಭಾವದಿಂದ ವಾತಾವರಣದ ವೈಪರಿತ್ಯದಿಂದ ಸೀತಾ, ಜ್ವರ, ರಕ್ತದ ಒತ್ತಡ ಸಕ್ಕರೆ ಕಾಯಿಲೆ ಮತ್ತು ದೃಷ್ಟಿ ವೈಫಲ್ಯ ಹೊಂದಿರುವ ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ತಾಲೂಕಿನ ಬಾಯಿದೊಡ್ಡಿ ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಕುರುಬದೊಡ್ಡಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ರಾಯಚೂರು ಹಾಗೂ ದೃಷ್ಟಿ ಕಣ್ಣಿನ ಆಸ್ಪತ್ರೆ ರಾಯಚೂರು ಇವರ ಸಂಯೋಗದಲ್ಲಿ ಇಂದು ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
ಈ ಒಂದು ಉಚಿತ ಆರೋಗ್ಯ ತಪಾಸಣೆಯಲ್ಲಿ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಂಡರು, ಗ್ರಾಮ ಪಂಚಾಯಿತಿ ಸದಸ್ಯರಾದ ಸಂಗೀತ ಬಸವರಾಜ್ ರವರು ಈ ಆರೋಗ್ಯ ತಪಾಸಣೆ ಅಭಿಯಾನದಲ್ಲಿ ಮಾತನಾಡುತ್ತಾ ಜನರಿಗೆ ವಾತಾವರಣದ ವೈಪರಿತ್ಯದಿಂದ ಆಗುವ ಅನಾರೋಗ್ಯದ ಕುರಿತು ಆರೋಗ್ಯದ ಸಲಹೆಗಳನ್ನು ನೀಡಿದರು. ಯಾವಾಗಲೂ ಬಿಸಿ ನೀರು ಕುಡಿಯಬೇಕು, ಬೆಚ್ಚನೆಯ ಸಾಕ್ಷಿ ಮತ್ತು ಸ್ವೆಟರ್ ಧರಿಸಬೇಕು, ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು, ನೆಗಡಿ ಶೀತ ಜ್ವರ ಕೆಮ್ಮು ಇರುವಂತಹ ವ್ಯಕ್ತಿಗಳು ಮಾಸ್ ಧರಿಸಬೇಕು ಎಂದು ವೈದರು ಆರೋಗ್ಯದ ಸಲಹೆಗಳು ತಿಳಿಸಿದರು. ಈ ಒಂದು ಅಭಿಯಾನದಲ್ಲಿ ತಾಯಪ್ಪ ಗ್ರಾಮ ಪಂ. ಸದ್ಯಸರು ಹೇಮಲತಾ ವೀರೇಶ್ ಗ್ರಾ.ಪಂ. ಸದ್ಯಸರು, ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗಳು, ಊರಿನ ಹಿರಿಯರು ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
![]() |
![]() |
![]() |
![]() |
![]() |