ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮರಂ ಸಾಗಾಣೆ ಕ್ರಮಕ್ಕೆ ಒತ್ತಾಯ
![]() |
![]() |
![]() |
![]() |
![]() |
ರಾಯಚೂರು : ತಾಲೂಕಿನ ಕೂಡ್ಲೂರು ಗ್ರಾಮದ ಸರ್ವೆ ನಂ.88, 184, 166ರ ಸರ್ಕಾರಿ ಗೈರಾಣಿ ಗೋಮಾಳ ಹಾಗೂ ಹುಲ್ಲು ಬೆಳೆಯುವ ಪ್ರದೇಶದಲ್ಲಿ ರಾಷ್ಟ್ರೀಯ ಹೆಚ್ಚಾರಿ ಗುತ್ತಿಗೆದಾ ರರು ಅನಧಿಕೃತವಾಗಿ ಮೊರಂ ಸಾಗಾಣೆ ಮಾಡು ತ್ತಿದ್ದು ತಡೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕೊಲ್ಲೂರು ಗ್ರಾಮದ ಸರ್ವೆ ನಂಬರ್ 88 ಮತ್ತು 94ರ ಕಂದಾಯ ದಾಖಲೆಗಳಲ್ಲಿ ಗೈರಾಣಿ ಎಂದು ದಾಖಲಾಗಿದ್ದು, 76 ಎಕರೆ ವಿಸ್ತೀರ್ಣವಿರುವ ಸರ್ಕಾರಿ ಜಮೀನು ಆಗಿದ್ದು, ಈ ಭೂಮಿಯಲ್ಲಿ ರೈತರು ಜಮೀನಿಗೆ ತೆರಳು ದಾರಿ ಹಾಗೂ ಜಾನು ವಾರುಗಳು ಉಪಯೋಗಕ್ಕಾಗಿ ಕಾಯ್ದಿರಿಸಲಾ ಗಿದೆ, ಸಾರ್ವಜನಿಕ ರಸ್ತೆ ಎಂದು ನಮೂದಾಗಿದೆ ಎಂದರು. ಈ ರಸ್ತೆಯು ಸಗಮಕುಂಟ ಗ್ರಾಮಕ್ಕೆ ತೆರಳುವ ರಸ್ತೆಯಾಗಿದೆ, ಸರ್ಕಾರವು ಈ ರಸ್ತೆ ಅಭಿವೃದ್ಧಿ ಪಡೆಸಿದೆ, ಆದರೆ ಈ ಜಮೀನುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು ಅನಧಿಕೃತವಾಗಿ ದೌರ್ಜನ್ಯ ದಿಂದ ಮರಂ ಸಾಗಾಣೆ ಮಾಡುತ್ತಿದ್ದಾರೆ ಎಂದು ದೂರಿದರು.
ರಾಷ್ಟ್ರೀಯ ಹೆದ್ದಾರಿಯು ನಿರ್ಮಾಣದಿಂದ ಸುತ್ತಮುತ್ತಲಿನ ಜಮೀನುಗಳಿಗೆ ಹೋಗುವ ರಸ್ತೆ ಮಾಡುತ್ತಿಲ್ಲ, ಹೆದ್ದಾರಿಯಲ್ಲಿ ಕೆಳ ಸೇತುವೆ ರಸ್ತೆ ಅಥವಾ ಮೇಲ್ಸೇತುವೆ ರಸ್ತೆ ನಿರ್ಮಾಣ ಮಾಡಬೇಕು, ರಸ್ತೆ ಇಲ್ಲದಿದ್ದರೆ ರೈತರು ಜಮೀನುಗಳಿಗೆ ಹೋಗಲು ಸಾಧ್ಯವಿಲ್ಲ ಈ ಕೂಡಲೇ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
![]() |
![]() |
![]() |
![]() |
![]() |