K2kannadanews.in
Local News ರಾಯಚೂರು : ನಗರದ ಪಟೇಲ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಜರುಗಿದ್ದು ಅಗ್ನಿಶಾಮಕ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ಒಂದು ತಪ್ಪಿದೆ.
ರಾಯಚೂರು ನಗರದ ಪಟೇಲ್ ರಸ್ತೆಯಲ್ಲಿ ಉದಯ್ ಕುಮಾರ್ ಎನ್ನುವವರಿಗೆ ಸೇರಿದ ಕಚೋರಿ ಸಮೋಸ ಸಿದ್ಧಪಡಿಸುವ ಮನೆಯಲ್ಲಿ ಅವಘಡ ಜರುಗಿದೆ. ಇನ್ನು ಮನೆಯಲ್ಲಿ ನಾಲ್ಕು ತುಂಬಿದ ಸಿಲಿಂಡರ್‌ಗಳಿದ್ದವು. ಪಟೇಲ್ ರಸ್ತೆಯಲ್ಲಿ ಸಮೋಸ ಕಚೋರಿದೆ ವಿವಿಧ ತಿಂಡಿಗಳನ್ನು ಮಾರಾಟ ಮಾಡುವ ಸಣ್ಣದಾದ ಅಂಗಡಿ ಹೊಂದಿದ್ದು ಅಲ್ಲಿನ ತಿಂಡಿಗಳ ತಯಾರಿಕೆಗಾಗಿ ಹಿಂಬದಿಯಲ್ಲಿ ಮನೆಯನ್ನು ಬಳಕೆ ಮಾಡುತ್ತಿದ್ದರು. ಅದೇ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತಿ ಉರಿದಿದೆ, ಈ ವೇಳೆ ಮನೆಯಲ್ಲಿ ನಾಲ್ಕು ತುಂಬಿದ ಅಡುಗೆಗಾಗಿ ಬಳಸಲು ನಾಲ್ಕು ತುಂಬಿದ ಸಿಲಿಂಡರ್ ಗಳನ್ನು ಇಡಲಾಗಿದ್ದು. ಬೆಂಕಿ ಹೊಂದಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತಪ್ಪಿದೆ.
ಒಂದು ವೇಳೆ ಬೆಂಕಿ ತಗುಲಿ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರೆ ಅಕ್ಕಪ್ಪಕ್ಕದ ಮನೆಗಳಲ್ಲಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತುಬೆನ್ನಲಾಗಿದೆ. ಘಟನೆಯಲ್ಲಿ ತಿಂಡಿಗೆ ಬಳಸುತ್ತಿದ್ದ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.