K2kannadanews.in
Fine for auto ರಾಯಚೂರು : ಕಳೆದ ಎರಡು ದಿನಗಳ ಹಿಂದೆ ರಾಯಚೂರು ನಗರದ ಸದಾರ ಬಜಾರ ಪೋಲೀಸ್ ಠಾಣೆ ಹಾಗೂ ಟ್ರಾಫಿಕ್ ಪೋಲೀಸ್ ಠಾಣೆಯಿಂದ ಠಾಣೆಯ ಪಿ.ಐ. ಉಮೇಶ ಕಾಂಬ್ಳೆ ಹಾಗೂ ಟ್ರಾಫಿಕ್ ಪಿ.ಎಸ್.ಐ. ವೆಂಕಟೇಶರವರ ನೇತೃತ್ವದಲ್ಲಿ ಆಟೋ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಚರಣೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಹೌದು ನಗರದಲ್ಲಿನ ಧಾಖಲೆ, ಇನ್ಸುರೆನ್ಸ್, ನಂಬರ ಪ್ಲೇಟ್ ಮತ್ತು ಲೈಟ್ ಗಳಿಲ್ಲದ ಹಳೇ ಆಟೋಗಳ ದಾಖಲೆ ಪರಿಶೀಲನೆ ಮಾಡಲಾಯಿತು. ಈ ವೇಳೆ ದಾಖಲೆ ಇಲ್ಲದ ಸುಮಾರು ಆಟೋಗಳಿಗೆ 200 ರೂ ದಂಡ ವಿದಿಸಿದ್ದಾರೆ. ಈ ವೇಳೆ ಸಿಪಿಐ ಉಮೇಶ ಕಾಂಬ್ಳೆಯವರು 15 ದಿನಗಳ ಒಳಗೆ ನಿಮ್ಮ ಆಟೋಗಳನ್ನು ಮತ್ತೆ ದಾಖಲೆ ಪರಿಶೀಲನೆ ಮಾಡಲಾಗುವುದು, ಅಷ್ಟರಲ್ಲಿ ಆಟೋಗಳನ್ನು ದಾಖಲೆ ಸರಿಪಡಿಸಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಒಂದು ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಇಲಾಖೆ ಈ ಒಂದು ತಪಾಸಣೆ ಕಾರ್ಯ ಮುಂದೆವರೆಸಬೇಕು. ಟ್ರಾಫಿಕ್ ಪೊಲೀಸರು ಕೂಡ ಪ್ರತಿಯೊಂದು ಆಟೊ ಚಾಲಕರಿಗೆ ಕರೆಸಿ ಜಾಗೃತಿ ಮೂಡಿಸಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲಿ ಎಂದು ಹೇಳುತ್ತಿದ್ದಾರೆ.