![]() |
![]() |
![]() |
![]() |
![]() |
ರಾಯಚೂರು : 2023ರ ಚುನಾವಣೆಗೆ ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ಬಹುತೇಕ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್ ಆದಂತಾಗಿದ್ದು, ಈ ಪಟ್ಟಿಯಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಅಂತಿಮವಾಗಿಲ್ಲ ಎಂಬ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.
ರಾಯಚೂರು ಜಿಲ್ಲೆಯಲ್ಲಿ, ಹಾಲಿ ಶಾಸಕರಾದ ಡಾ. ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ್, ಮಾಜಿ ಶಾಸಕರಾದ ತಿಪ್ಪರಾಜ ಹವಾಲ್ದಾರ್, ಪ್ರತಾಪ್ ಗೌಡ ಪಾಟೀಲ್ ಹೆಸರುಗಳು ಮಾತ್ರ ಅಂತಿಮವಾಗಿವೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ, ಪ್ರಸ್ತುತ ರಾಯಚೂರು ನಗರ ಕ್ಷೇತ್ರ, ಗ್ರಾಮಾಂತರ ಕ್ಷೇತ್ರ, ದೇವದುರ್ಗ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳಿಗೆ ಟಿಕೆಟ್ ಫಿಕ್ಸ್ ಎಂದು ಹೇಳಲಾಗುತ್ತಿದೆ.
ರಾಯಚೂರು ಜಿಲ್ಲೆಯ ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ:
* ರಾಯಚೂರು (ಗ್ರಾಂ) – ತಿಪ್ಪರಾಜ್ ಹವಾಲ್ದಾರ್
* ರಾಯಚೂರು – ಡಾ.ಶಿವರಾಜ್ ಪಾಟೀಲ್
* ಮಾನ್ವಿ –
* ದೇವದುರ್ಗ – ಶಿವನಗೌಡ ನಾಯಕ್
* ಲಿಂಗಸುಗೂರು –
* ಸಿಂಧನೂರು –
* ಮಸ್ಕಿ – ಪ್ರತಾಪ್ ಗೌಡ ಪಾಟೀಲ್
ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರ, ಸಿಂಧನೂರು ಮತ್ತು ಲಿಂಗಸುಗೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ. ಗಮನಾರ್ಹ ವಿಚಾರವೆಂದರೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ, ಮಾಜಿ ಶಾಸಕ ಮಾನಪ್ಪ ಡಿ ವಜ್ಜಲ್ ಅವರು ಇದ್ದರೂ ಕೂಡ ಪಟ್ಟಿಯಲ್ಲಿ ಅವರ ಹೆಸರು ಇನ್ನೂ ಅಂತಿಮವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
![]() |
![]() |
![]() |
![]() |
![]() |
[ays_poll id=3]