ಕತ್ತು ಹಿಸುಕಿ ಮಗನನ್ನು ಕೊಂದ ತಂದೆಗೆ ದಂಡ, ಜೀವಾವಧಿ ಕಾರಾಗೃಹ ಶಿಕ್ಷೆ..

K 2 Kannada News
ಕತ್ತು ಹಿಸುಕಿ ಮಗನನ್ನು ಕೊಂದ ತಂದೆಗೆ ದಂಡ, ಜೀವಾವಧಿ ಕಾರಾಗೃಹ ಶಿಕ್ಷೆ..
WhatsApp Group Join Now
Telegram Group Join Now

K2kannadanews.in

life imprisonment ಸಿಂಧನೂರು : 4 ವರ್ಷದ ಪುತ್ರ (son) ಮಹೇಶನನ್ನು ಅಪಹರಿಸಿ ಕೊಲೆಗೈದಿದ್ದ (Murdered) ತಂದೆಗೆ (father) ಶಿಕ್ಷೆ ಹಾಗೂ ದಂಡವನ್ನು (Fine) ವಿಧಿಸಿ ಸಿಂಧನೂರು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ತೀರ್ಪು ನೀಡಿದ್ದಾರೆ.

ಹೌದು ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ತಾಲುಕಿನ ಪುಟ್ಕಿನಾಳ ಗ್ರಾಮದ ಹಳ್ಳದ ಬಳಿ ಕೊಲೆ ನಡೆದಿತ್ತು. ಯಲ್ಲಪ್ಪ ತನ್ನ ಪತ್ನಿಯನ್ನು (Wife) ಕರೆದುಕೊಂಡು ಬರಲು ಆಕೆಯ ತವರೂರಾದ ಎಲೆಕೂಡ್ಲಿಗಿ (Elekudlagi) ಗ್ರಾಮಕ್ಕೆ 2021ರ ಫೆಬ್ರುವರಿ 1ರಂದು ಹೋದಾಗ ನಿರಾಕರಿಸಿದ್ದಾಳೆ. ಆಗ 4 ವರ್ಷದ ಪುತ್ರ ಮಹೇಶನನ್ನು (Mahesh) ಅಪಹರಿಸಿಕೊಂಡು (Kidnapping) ಹೋಗಿ, 2ನೇ ಆರೋಪಿತಳ ಪ್ರಚೋದನೆಯಿಂದ ಪುಟ್ಕಿನಾಳ ಗ್ರಾಮದ ಹಳ್ಳದ ಹತ್ತಿರ ಪುತ್ರನ ಕತ್ತು ಹಿಸುಕಿ ಕೊಲೆ ಮಾಡಿದ್ದ, ಯಲ್ಲಪ್ಪನ ವಿರುದ್ಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ (Thrvihal police station) ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಸಿಪಿಐ (CPI) ಚಂದ್ರಶೇಖರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು (later) ಸಲ್ಲಿಸಿದ್ದರು. ಈ ಪ್ರಕರಣದವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮಂಗಳವಾರ 1ನೇ ಆರೋಪಿ ಯಲ್ಲಪ್ಪ ಅಪರಾಧ ಎಸಗಿದ್ದಾರೆಂದು ಪರಿಗಣಿಸಿ ಆತನಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 2ನೇ ಆರೋಪಿತಳ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.

WhatsApp Group Join Now
Telegram Group Join Now
Share This Article