K2kannadanews.in
Crocodile sighting ದೇವದುರ್ಗ : ಕೃಷಿ (agricultural) ಹೊಂಡದಲ್ಲಿ (Pit) ಮೊಸಳೆ (Crocodile) ಪ್ರತ್ಯಕ್ಷವಾಗಿ, ರೈತರಲ್ಲಿ ಆತಂಕ ಮೂಡಿಸಿದ್ದು. ಚಿಕ್ಕಬೂದೂರು ಗ್ರಾಮದ ರೈತ (Farmer) ಸಿದ್ದನಗೌಡ ಎಂಬುವವರ ಜಮೀನಿನ (Land) ಕೃಷಿ ಹೊಂಡದಲ್ಲಿ ಮೊಸಳೆ ಪ್ರತ್ಯಕ್ಷವಾದ ಘಟನೆ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಚಿಕ್ಕಕೆರೆಬೂದೂರು ಗ್ರಾಮದಲ್ಲಿ ಘಟನೆ ನಡೆಸಿದ್ದು. ಆಹಾರ (Food) ಅರಸಿ ರೈತರ ಜಮೀನಿಗೆ ಲಗ್ಗೆ ಇಟ್ಟಿದ್ದ ಮೊಸಳೆಯನ್ನ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ಕೃಷಿ ಚಟುವಟಿಕೆಗಳಿಗಾಗಿ ಜಮೀನುಗಳಿಗೆ ಹೋಗಲು ಹೆದರುವಂತ (fear) ಪರಸ್ಥಿತಿ ನಿರ್ಮಾಣವಾಗಿತ್ತು.
ಅರಣ್ಯಾಧಿಕಾರಿಗಳ (forest) ಸಮ್ಮುಖದಲ್ಲಿ ಗ್ರಾಮಸ್ಥರು (Villagers) ಬಲೆ ಹಾಕುವ ಮೂಲಕ ಮೊಸಳೆಯನ್ನ ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ (Staff) ಗೂಗಲ್ ಗ್ರಾಮದ ಬಳಿ ಕೃಷ್ಣಾ ನದಿಗೆ ಸುರಕ್ಷಿತವಾಗಿ ಮೊಸಳೆಯನ್ನ ಬಿಟ್ಟಿದ್ದಾರೆ. ಮೊಸಳೆಯನ್ನ ಹಿಡಿದು ನದಿಗೆ ಬಿಟ್ಟಿದ್ದರಿಂದ ರೈತರು ನಿರಾಳಾರಾಗಿದ್ದಾರೆ.