This is the title of the web page
This is the title of the web page
State News

ಕೃಷಿಯಲ್ಲಿ ರೈತ ಕೇಂದ್ರೀಕೃತವಾದ ಕಾರ್ಯಕ್ರಮಗಳನ್ನು ನೀಡಲಿದ್ದೇವೆ


K2 ನ್ಯೂಸ್ ಡೆಸ್ಕ್ : ಬರುವ ದಿನಗಳಲ್ಲಿ ರಾಜ್ಯ ಸರ್ಕಾರ ರೈತ ಕೇಂದ್ರೀಕೃತವಾದ ಕಾರ್ಯಕ್ರಮಗಳನ್ನು ಕೃಷಿಯಲ್ಲಿ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಾಲದ ಮಿತಿಗಳನ್ನು ಹೆಚ್ಚಿಸಲು ವೈಜ್ಞಾನಿಕ ವರದಿ : ಬೀಜ ಗೊಬ್ಬರಗಳನ್ನು ವಿತರಿಸುವ ವ್ಯವಸ್ಥೆಯಲ್ಲಿ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅದನ್ನು ನಿವಾರಿಸಲು ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ರೈತರಿಗೆ ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಸಾಲದ ಮಿತಿಗಳನ್ನು ಹೆಚ್ಚಿಸಲು ವೈಜ್ಞಾನಿಕವಾಗಿ ವರದಿಯನ್ನು ನೀಡಲು ಸೂಚಿಸಲಾಗಿದೆ. ವರದಿ ಬಂದ ಕೂಡಲೇ ರೈತ ಸಾಲದ ಮಿತಿಯನ್ನು ಹೆಚ್ಚಿಸಲು ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ರೈತನ ಬೆಳೆಗೆ ಸಂಬಂಧಿಸಿದಂತೆ 10 ವರ್ಷಗಳ ಮಳೆಯ ವಿಧಾನವನ್ನು ಅನುಸರಿಸಿ ವೈಜ್ಞಾನಿಕ ವರದಿ ತಯಾರಿಸುವ ವ್ಯವಸ್ಥೆ ಇಲ್ಲಿಯೂ ಜಾರಿಗೆ ಬರಬೇಕು. ಆಗ ರೈತರ ನಷ್ಟ ತಗ್ಗಲಿದೆ ಎಂದರು.

ಯೋಚನೆಗಳನ್ನು ಯೋಜನೆಗಳನ್ನಾಗಿ ಪರಿವರ್ತನೆ : ಯಶಸ್ವಿನಿ ಯೋಜನೆಯನ್ನು ಈ ವರ್ಷ ಮರುಪ್ರಾರಂಭ ಮಾಡಿದ್ದು, ಜನವರಿ ಒಂದರಿಂದ 36 ಲಕ್ಷ ರೈತರು ನೋಂದಣಿ ಮಾಡಿಸಿದದದು, 300 ಕೊಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ, ಕೆಲವು ಮಾರ್ಪಾಡುಗಳನ್ನು ಇಂದಿನ ವೈದ್ಯಕೀಯ ವ್ಯವಸ್ಥೆಗಳಿಗೆ ತಕ್ಕಂತೆ ಮಾಡಲು ಸೂಚಿಸಲಾಗಿದೆ. ಈ ವರ್ಷ 31 ಲಕ್ಷ ಜನರಿಗೆ ಸಹಕಾರಿ ಸಾಲವನ್ನು ಒದಗಿಸಲಾಗಿದೆ. ಅದರಲ್ಲಿ ಮೂರು ಲಕ್ಷ ರೈತರಿಗೆ ಹೊಸದಾಗಿ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ. ಹಲವಾರು ಯೋಚನೆಗಳನ್ನು ಯೋಜನೆಗಳನ್ನಾಗಿ ಪರಿವರ್ತಿಸಿ ನಮ್ಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಹವಾಮಾನ ವೈಪರೀತ್ಯಗಳು, ಕೃಷಿ ಹಾಗೂ ಸಂಶೋಧನೆಗಳಲ್ಲಿ ಆಗುವ ಬದಲಾವಣೆ ರೈತರ ಮೇಲೆ ಪರಿಣಾಮ ಬೀರಲಿದೆ. ಕಾಲಕ್ಕೆ ತಕ್ಕಂತೆ ರೈತರು, ಸರ್ಕಾರ ಬದಲಾವಣೆಗಳನ್ನು ಮಾಡಿಕೊಂಡು ಸವಾಲುಗಳನ್ನು ಎದುರಿಸಬೇಕಿದೆ.

ವಿಶ್ವದಲ್ಲಿ ಹವಾಮಾನ ವೈಪರೀತ್ಯ ಹಾಗೂ ಕೋವಿಡ್ ಕಾರಣದಿಮದ ಆಹಾರದ ಭದ್ರತೆಗೆ ಬಹಳ ದೊಡ್ಡ ಸವಾಲಿದೆ. ಅಕ್ಕಪಕ್ಕದ ದೇಶಗಳಲ್ಲಿ ಆಹಾರ ದೊರಕದ ಸ್ಥಿತಿಯಿದೆ. ಭಾರತದಲ್ಲಿ ಮಾತ್ರ ಸಂಪೂರ್ಣವಾದ ಆಹಾರ ಭದ್ರತೆಯಿದೆ. ಪಡಿತರ ವ್ಯವಸ್ಥೆಯಿಂದ ಹಿಡಿದು ಮಾರುಕಟ್ಟೆಗೆ ಬೇಕಾಗಿರುವ ವ್ಯವಸ್ಥೆ ಇದೆ. ರೈತ ಹಾಗೂ ಆತನ ಶ್ರಮ ಮತ್ತು ಸರ್ಕಾರದ ನೀತಿಗಳು ಇದಕ್ಕೆ ಕಾರಣ. ನಮ್ಮ ಆಹಾರದ ಭದ್ರತೆಯನ್ನು ಕಾಪಾಡಿಕೊಂಡರೆ, ಸ್ವಾಭಿಮಾನಿ ರಾಷ್ಟ್ರವಾಗಲು ಸಾಧ್ಯ.ಸ ಕರ್ನಾಟಕ ಪ್ರಗತಪರವಾದ ರಾಜ್ಯ. ರೈತರ ಪರವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಸರ್ಕಾರ ಎಂದರು.

ಕೃಷಿಯಲ್ಲಿ ಸಂಶೋಧನೆ, ಹೊಸತನದ ಅಗತ್ಯವಿದೆ :
ನಮ್ಮಲ್ಲಿ ಹಸಿರು ಕ್ರಾಂತಿಯಾಗಿದೆ. 133 ಕೋಟಿ ಜನಸಂಖ್ಯೆಯಾದರೂ ಎಲ್ಲರಿಗೂ ಅನ್ನ ನೀಡುವ ಸಾಮಥ್ರ್ಯ ರೈತರಿಗೆ ಬಂದಿರುವುದು ರೈತನ ಶ್ರಮ ಮತ್ತು ಬೆವರು ಕಾರಣ. ಆದರೆ ಹಸಿರು ಕ್ರಾಂತಿ ತಂದಿರುವ ರೈತನ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ. ಸರ್ಕಾರಗಳು ಚಿಂತನೆ ಮಾಡಬೇಕು. ಕೃಷಿ ನೀತಿಗಳನ್ನು ರೂಪಿಸಿದ್ದೇವೆ. ಕೃಷಿಯಲ್ಲಿ ಸಂಶೋಧನೆ, ಹೊಸತನ, ನೈಸರ್ಗಿಕ, ಸಾವಯವ ಅಗತ್ಯವಿದೆ ಎಂದರು.


[ays_poll id=3]