K2kannadanews.in
Heavy Rain ರಾಯಚೂರು : ಮೂರ್ನಾಲ್ಕು ದಿನಗಳಿಂದ (days) ಸುರಿಯುತ್ತಿರುವ ನಿರಂತರ (Rain) ಮಳೆಯಿಂದಾಗಿ ಹಲವು ಮನೆಗಳು (House) ಕುಸಿದು ಬಿದ್ದ ಘಟನೆ ಮರ್ಚೆಡ್ ಗ್ರಾಮದಲ್ಲಿ ಜರುಗಿದೆ.
ರಾಯಚೂರು (Raichur) ತಾಲೂಕಿನ ಮರ್ಚೆಡ್ ಗ್ರಾಮದಲ್ಲಿ ಘಟನೆ ಜರುಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಕಳೆದ ಮೂರು ನಾಲ್ಕು ದಿನದಿಂದ ಜಿಲ್ಲೆಯಲ್ಲಿ (District) ಜಿಟಿ ಜಿಟಿ ಮಳೆ ಹಿನ್ನಲೆ, ಗ್ರಾಮದ ಮಣ್ಣಿನ ಮನೆಗಳು ಬಿದ್ದಿವೆ. ವ್ಯವಸಾಯ (Farmer), ಕೂಲಿ ಮಾಡಿ ಬದುಕುತ್ತಿದ್ದ ಬಡ ಕುಟುಂಬಗಳು (family) ಇರುವ ಒಂದು ಸೂರನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ.
ಗ್ರಾಮದಲ್ಲಿ ಕೆಲ ಮನೆಗಳ ಗೋಡೆ ಕುಸಿದಿದ್ದರೆ ಇನ್ನೂ ಕೆಲ ಮನೆಗಳು ಸಂಪೂರ್ಣ ನೆಲಕ್ಕಚ್ಚಿವೆ. ಗ್ರಾಮದ ಯಲ್ಲಮ್ಮ, ರಂಗಮ್ಮ, ರಜಿಯಾಬಾನು, ಈಶಪ್ಪ , ಆಶಾಬಾನು, ರಂಗಪ್ಪ ಎಂಬುವವರ ಮನೆಗಳು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆ ಬಿದ್ದಿರುವುದರಿಂದ ಮನೆಯಲ್ಲಿದ್ದ ಆಹಾರ ಪದಾರ್ಥಗಳು, ವಸ್ತುಗಳು ಜಕಂಕೊಂಡಿದ್ದು ಉಳಿದುಕೊಳ್ಳಲು ಸ್ಥಳ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.