ನಿಗಮದ ದುಡ್ಡಿನಲ್ಲಿ ಚುನಾವಣೆಗೆ ಖರ್ಚು, ಮದ್ಯ, ಐಷಾರಾಮಿ ಕಾರು ಖರೀದಿಯಾಗಿದೆ..

K 2 Kannada News
ನಿಗಮದ ದುಡ್ಡಿನಲ್ಲಿ ಚುನಾವಣೆಗೆ ಖರ್ಚು, ಮದ್ಯ, ಐಷಾರಾಮಿ ಕಾರು ಖರೀದಿಯಾಗಿದೆ..
WhatsApp Group Join Now
Telegram Group Join Now

K2kannadanews.in

187 core Ford ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 90 ಕೋಟಿ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದು, ಈ ಹಣವನ್ನು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಗೆ ಮದ್ಯ ಖರೀದಿಗಾಗಿ ಹಾಗೂ ದುಬಾರಿ ಬೆಲೆಯ ವಾಹನಗಳ ಖರೀದಿಗೆ ಬಳಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ದುಡ್ಡಿನಲ್ಲಿ ಚುನಾವಣೆಗೆ ಖರ್ಚು, ಮದ್ಯ ಖರೀದಿ ಹಾಗೂ ಐಷಾರಾಮಿ ಕಾರು (ಲ್ಯಾಂಬೋರ್ಗಿನಿ ) ಖರೀದಿಸಲು ಬಳಕೆ ಮಾಡಲಾಗಿದೆ ಎಂದು ಇಡಿ ಸ್ಪಷ್ಟಪಡಿಸಿದೆ. ಈ ಮೂಲಕ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಶಾಸಕ ಬಸನಗೌಡ ದದ್ದಲ್​​​​​​ ಕೈವಾಡ ಇರುವುದು ಖಚಿತವಾಗಿದೆ.

ಅಕ್ರಮದಲ್ಲಿ 89.65 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಹಗರಣದ ತನಿಖೆಯ ಭಾಗವಾಗಿ 4 ರಾಜ್ಯಗಳು ಸೇರಿ ಒಟ್ಟು 23 ಕಡೆ ದಾಳಿ ನಡೆಸಿದೆ. ಇದಲ್ಲದೇ 18 ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಮನೆಯಲ್ಲಿ ಅನೇಕ ದಾಖಲೆಗಳು ದಾಳಿ ವೇಳೆ ಪತ್ತೆಯಾಗಿವೆ ಎಂದು ಇಡಿ ಹೇಳಿದೆ.

WhatsApp Group Join Now
Telegram Group Join Now
Share This Article