This is the title of the web page
This is the title of the web page
Political

ನನ್ನ ಹೆಣ ಕೂಡಾ ಬಿಜೆಪಿಗೆ ಹೋಗಲ್ಲ: ಸಿದ್ದರಾಮಯ್ಯ


K2 ಪೊಲಿಟಿಕಲ್ ನ್ಯೂಸ್ : ಜೆಡಿಎಸ್‍ಗೆ ಸಿದ್ಧಾಂತ, ವೈಚಾರಿಕತೆ ಇಲ್ಲ. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗ್ತಾರೆ. ಆದರೆ ನನ್ನನ್ನು ರಾಷ್ಟ್ರಪತಿ, ಪಿಎಂ ಮಾಡ್ತಿನಿ ಅಂದ್ರೂ ನನ್ನ ಹೆಣವೂ ಕೂಡಾ ಬಿಜೆಪಿಗೆ ಹಾಗೂ ಆರ್‌ಎಸ್‍ಎಸ್ ಜೊತೆ ಹೋಗಲ್ಲ ಮಾಜಿ ಸಿಎಂ ಗರಂ ಆಗಿ ಹೇಳಿದ್ದಾರೆ.

ಜೆಡಿಎಸ್‌ನವರಿಗೆ ಮಾನ, ಮರ್ಯಾದೆ ಇದ್ಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಜೆಡಿಎಸ್‌ಗೆ ಸಿದ್ಧಾಂತ, ವೈಚಾರಿಕತೆ ಇಲ್ಲ. ಅಧಿಕಾರಕ್ಕೋಸ್ಕರ ಬಿಜೆಪಿ ಜೊತೆ ಹೋಗುತ್ತದೆ. ನನ್ನನ್ನು ರಾಷ್ಟ್ರಪತಿ, ಪಿಎಂ ಮಾಡ್ತಿನಿ ಅಂದ್ರೂ, ನನ್ನ ಹೆಣ ಕೂಡಾ ಬಿಜೆಪಿಗೆ ಹಾಗೂ ಆರ್‌ಸ್ಎಸ್ ಜೊತೆ ಹೋಗಲ್ಲ. ಬಿಜೆಪಿಯ ಆ ಸಿ.ಟಿ.ರವಿ ನನ್ನ ಸಿದ್ದರಾಮುಲ್ಲಾ ಖಾನ್ ಅಂತಾನೆ. ಆದರೆ, ಗಾಂಧೀಜಿ ಅಪ್ಪಟ ಹಿಂದೂ. ಅಂತವರನ್ನ ಕೊಂದ ಗೋಡ್ಸೆಯನ್ನ ಪೂಜಿಸುವ ಇವರು ಹಿಂದೂನಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


60
Voting Poll