ಪಕ್ಷಗಳಲ್ಲಿ ಅಜೆಂಡಾ ಸಿದ್ಧಗೊಳ್ಳದೆ ಚುನಾವಣೆ..!
![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್: 2023 ವಿಧಾನಸಭಾ ಚುನಾವಣೆಗೆ ದಿನಗಳು ಆರಂಭವಾಗಿವೆ. ಆದರೆ ರಾಜ್ಯದಲ್ಲಿ ಪಕ್ಷಗಳು ಇದುವರೆಗೂ ಯಾವುದೇ ಅಜೆಂಡಾಗಳನ್ನು ಸಿದ್ಧತೆ ಮಾಡಿಕೊಳ್ಳದೆ ಇರುವುದು ಕಂಡುಬರುತ್ತಿದೆ.
ಇರುವ ಮೂರು ಪಕ್ಷಗಳಲ್ಲಿ ಇದುವರೆಗೂ ಅಂತಿಮವಾಗಿ ಪ್ರಣಾಳಿಕೆಯಾಗಿಲ್ಲ, ಅಭ್ಯರ್ಥಿಗಳ ಘೋಷಣೆಯಾಗಿಲ್ಲ, ಕ್ಷೇತ್ರಗಳಲ್ಲಿ ಪ್ರಚಾರದ ಅಬ್ಬರ ಆರಂಭವಾಗಿಲ್ಲ. ರಾಜಕೀಯ ಪಕ್ಷಗಳ ಚುನಾವಣಾ ವಿಷಯ ಇದುವರೆಗೂ ಅಂತಿಮಗೊಂಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚುನಾವಣೆ ಸಾವರ್ಕರ್ V/S ಟಿಪ್ಪುಸುಲ್ತಾನ್ ಎಂದು ಹೇಳಿದ್ದರೂ ಅದಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ದೊರೆತಿಲ್ಲ. ಕಾಂಗ್ರೆಸ್ ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ. ಬಿಜೆಪಿ ಪರ ಹಿಂದೂ ಮತಗಳ ಕ್ರೋಢೀಕರಣವಾಗದಂತೆ ಎಚ್ಚರಿಕೆ ವಹಿಸುತ್ತಿದೆ. ಹಿತ ಜೆಡಿಎಸ್ ಪಕ್ಷದಲ್ಲಿ ವರಿಷ್ಠರು ಮಾತ್ರ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.
![]() |
![]() |
![]() |
![]() |
![]() |